

ಮಂಜುನಾಥ ಅಯ್ಯಸ್ವಾಮಿ, ಹೊಸಪೇಟೆ
ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ಕಳಚಿ ಒಂಬತ್ತು ತಿಂಗಳ ಬಳಿಕ ಆಂದ್ರದ ಕೆಎಸ್-ಎನ್‌ಡಿಟಿ ತಜ್ಞರ ತಂಡ ವರದಿ ವರದಿ ನೀಡಿದ್ದು, ಮೂರು ಹಂತದಲ್ಲಿ ಗೇಟ್‌ಗಳ ಬದಲಾವಣೆ ಮಾಡಲು ಟಿಬಿಬಿ ಮಂAಡಳಿ ತಿರ್ಮಾನಿಸಿದೆ. ಈ ಸಲ 19ನೇ ಗೇಟ್ ಮಾತ್ರ ಫಿಕ್ಸ್ ಆಗಲಿದೆ.
105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ತುಂಗಭದ್ರಾ ಜಲಾಶಯ ಆಂದ್ರ, ತೆಲಂಗಾಣ ಹಾಗೂ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ರೈತರಿಗೆ ನೀರು ಒದಗಿಸುತ್ತದೆ. ಈ ಭಾಗದ ಕೈಗಾರಿಕೆಗಳಿಗೂ ಜಲಾಶಯ ಆಸರೆಯಾಗಿದೆ. ಆದರೆ 2024ರ ಆ.10ರಂದು 19ನೇ ಕ್ರಸ್ಟ್ಗೇಟ್ ಕಳಚಿ ದುರಂತ ನಡೆದಿತ್ತು. ಒಂಬತ್ತು ತಿಂಗಳ ಬಳಿಕ ಆಂದ್ರದ ಕೆಎಸ್-ಎನ್‌ಡಿಟಿ ತಜ್ಞರ ತಂಡ ಕಳೆದ ಒಂದು ತಿಂಗಳ ಕಾಲ ಜಲಾಶಯದ ಕ್ರ‍್ರಸ್ಟ್ಗೇಟ್‌ಗಳ ಹಾಗೂ ಡ್ಯಾಮ್ ಬಲಿಷ್ಟತೆಯ ಅಧ್ಯಯನ ನಡೆಸಿ, ವರದಿ ವರದಿ ನೀಡಿದೆ. ಈ ವರದಿ ಆಧಾರದ ಮೇಲೆ ಮಂಡಳಿಯ ಅನುಷ್ಠಾನ ಸಮಿತಿ ಇ-ಟೆಂಡರ್ ಕರೆಯಲಾಗಿದೆ. ಜಲಾಶಯದಲ್ಲಿ ಸಧ್ಯ 7.612 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಮೊದಲು 19 ನೇ ಗೇಟ್ ಅಳವಡಿಕೆ, ನಂತರ 2026 ಮತ್ತು 2027ರ ಬೇಸಿಗೆಯಲ್ಲಿ ಉಳಿದ ಗೇಟ್‌ಗಳ ಅಳವಡಿಕೆ ಮಾಡಲು, ಟಿಬಿಬಿ ಮಂAಡಳಿ ತಿರ್ಮಾನಿಸಿದೆ. ಏ.17ರಂದು ಟೆಂಡರ್ ಪ್ರಕ್ರಿಯೆಗೆ ಕೂಡ ಮುಗಿಯಲಿದೆ. ಟೆಂಡರ್ ಆಗುವ ಕಂಪನಿ ಜತೆ ಏ.20ರ ಒಳಗೆ ಒಪ್ಪಂದ ಮಾಡಿಕೊಂಡು 19ನೇ ಗೇಟ್ ಮಾತ್ರ ಬದಲಿಸುವ ಕಾಮಗಾರಿ ನಡೆಯಲಿದೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
19ನೇ ಕ್ರಸ್ಟ್ ಗೇಟ್ 2024ರ ಆ.10ರಂದು ಕಳಚಿ 40 ಟಿಎಂಸಿ ನೀರು ನದಿ ಪಾಲಾಗಿತ್ತು. ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡದಿAದ ಕಳಚಿದ ಗೇಟ್ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಮಾಡಿತ್ತು. ನಂತರ ಕೇಂದ್ರದ ಎ.ಕೆ. ಬಜಾಜ್ ನೇತೃತ್ವದ ತಾಂತ್ರಿಕ ಪರಿಣತರ ತಂಡ, ನ್ಯಾಶನಲ್ ಡ್ಯಾಂ ಸೇಫ್ಟಿ ಅಥಾರಿಟಿಯ ಚೇರ್‌ಮನ್ ಅನಿಲ್ ಜೈನ್ ನೇತೃತ್ವದ ತಂಡ, ಪಾಂಡೆ ನೇತೃತ್ವದ ಸಲಹಾ ಸಮಿತಿ ತಂಡ ಮತ್ತು ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ನೇತೃತ್ವದ ಅನುಷ್ಠಾನ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈಗ ಶಾಶ್ವತವಾಗಿ ಕ್ರಸ್ಟ್ಗೇಟ್ ಅಳವಡಿಸಲು ಟಿಬಿಬಿ ಸಿದ್ದತೆ ನಡೆಸಿದ್ದು, ಈ ಭಾಗದ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಸಮಾಧಾನ ತಂದಿದೆ.
ತುಂಗಭದ್ರಾ ಮಂಡಳಿ ಬಳಿ ಪ್ರಾಥಮಿಕ ಹಂತದಲ್ಲಿ ಗೇಟ್‌ಗಳ ವಿನ್ಯಾಸವಿದೆ. 19ನೇ ಗೇಟ್‌ಗೆ ಕೇಂದ್ರ ಸರ್ಕಾರದ ಡೈರೆಕ್ಟರ್ ಆಫ್ ಡಿಸೈನ್ ವಿಂಗ್ ಡಿಸೈನ್ ನೀಡಿದೆ. ಇದಕ್ಕೆ ಆಂಧ್ರಪ್ರದೇಶ ಸರ್ಕಾರದ ಪರಿಣತರ ತಂಡ ಕೂಡ ಸಹಮತ ವ್ಯಕ್ತಪಡಿಸಿದೆ. ಈ ಡಿಸೈನ್ ಆಧಾರದಲ್ಲೇ ಉಳಿದ 32 ಗೇಟ್‌ಗಳನ್ನು ಬದಲಿಸಲು ಮಂಡಳಿ ಚಿಂತನೆ ನಡೆಸಿದೆ. ತುಂಗಭದ್ರಾ ಜಲಾಶಯದ ಒಂದು ಕ್ರಸ್ಟ್ ಗೇಟ್ ಬದಲಿಸಲು 1.98 ಕೋಟಿ ರೂ. ವೆಚ್ಚದಲ್ಲಿ ಅಂದಾಜಿಸಲಾಗಿದೆ. 33 ಗೇಟ್‌ಗೆ 65.34 ಕೋಟಿ ರೂ. ವೆಚ್ಚದಲ್ಲಿ ವಿನ್ಯಾಸ ಸಿದ್ದತೆ ಮಾಡಲಾಗಿದೆ. ಈ ಪೈಕಿ ದುರಂತ ನಡೆದಿದ್ದ 19ನೇ ಗೇಟ್ ಮಾತ್ರ ಈ ಬಾರಿ ಅಳವಡಿಕೆ ಆಗಲಿದೆ. ಇನ್ನೂ ಉಳಿದ ಗೇಟ್‌ಗಳನ್ನು ಮುಂದಿನ 2026 ಹಾಗೂ 2027ರ ಬೇಸಿಗೆ ವೇಳೆ ತಲ 16 ಗೇಟ್‌ಗಳಂತೆ ಎರಡು ಹಂತದಲ್ಲಿ 32 ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ತಿರ್ಮಾನಿಸಿದೆ.
32 ಗೇಟ್ ಬದಲಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಆಸಕ್ತಿ ತೋರಿವೆ. ಅದರಲ್ಲಿ ರಾಜ್ಯ ಸರ್ಕಾರ ಗೇಟ್‌ಗಳ ಅಳವಡಿಕೆಗೆ ಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದೆ. ಒಮ್ಮೆಲೇ ಗೇಟ್ ಬದಲಿಸುವ ಕಾರ್ಯ ಕೈಗೊಂಡರೆ, ಮಳೆಗಾಲದಲ್ಲಿ ಸಮಸ್ಯೆ ಆದೀತು ಎಂದು ತಜ್ಞರ ಸಲಹೆ ಮೇಲೆ ಮೊದಲು 19ನೇ ಗೇಟ್ ಪ್ರಾಯೋಗಿಕವಾಗಿ ಅಳವಡಿಕೆ ನಡೆಲಾಗುತ್ತದೆ. ಆದಷ್ಟು ಬೇಗನೇ ಯಶಸ್ಸು ಕಂಡರೆ ಇದೇ ವರ್ಷ 10 ಗೇಟ್ ಬದಲಿಸುವುದಾಗಿ ಟಿಬಿಬಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಆದರೆ, 19ನೇ ಗೇಟ್ ಹೊರತು ಪಡಿಸಿ ಉಳಿದ ಗೇಟ್‌ಗಳ ಟೆಂಡರ್ ಕರೆಯಬೇಕಿದೆ. ಈ ವರ್ಷ ಅಳವಡಿಕೆ ಕಷ್ಟ. ಆದ್ದರಿಂದ ಮುಂದಿನ 2027ಕ್ಕೆ ಎಲ್ಲ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳ ಬದಲಾವಣೆಗೆ ಆಂಧ್ರಪ್ರದೇಶದ ಕೆಎಸ್‌ಎನ್‌ಡಿಟಿ ಸರ್ವೀಸ್ ಸಂಸ್ಥೆ ವರದಿ ನೀಡಿದೆ. 19ನೇ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಏ.20ರಿಂದ 19ನೇ ಗೇಟ್ ಅಳವಡಿಕೆ ಆಗಬಹುದು. ಉಳಿದ ಗೇಟ್‌ಗಳ ಇ-ಟೆಂಡರ್ ಶೀಘ್ರದಲ್ಲಿ ಕರೆಯಲಾಗುವುದು. - ಓ.ಆರ್.ಕೆ.ರೆಡ್ಡಿ, ತುಂಗಭದ್ರಾ ಮಂಡಳಿ ಕಾರ್ಯದರ್ಶಿ