ಕ್ರಸ್ಟ್ಗೇಟ್ ದುರಸ್ಥಿ ಕಾರ್ಯ ವೇಗ ಪಡೆಯಲಿ

06 MANJU 02
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್ಗೇಟ್ ದುರಸ್ಥಿ ಕಾರ್ಯ ವೇಗ ಪಡೆಯಲಿ ಎಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದಿAದ ಟಿಬಿಡ್ಯಾಂ ಆಡಳಿತ ಮಂಡಳಿ ಕಾರ್ಯದರ್ಶಿ ಓ.ರಾಮಕೃಷ್ಣ ರೆಡ್ಡಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ತುಂಗಭದ್ರ ಜಲಾಶಯದ 19ನೇ ಕ್ರಸ್ಟ್ಗೇಟ್ ಕಳಚಿ ವರ್ಷ ಕಳೆಯುತ್ತಿದೆ. ಆದಷ್ಟು ಬೇಗ ಎಲ್ಲಾ 33 ಗೇಟ್‌ಗಳನ್ನು ನೂತನವಾಗಿ ತಯಾರಿಸಿ ಅಳವಡಿಸುತ್ತೇವೆಂದು ಭರವಸೆ ನೀಡಿದ್ದೀರಿ. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಈಗ ತಾವು ಟೆಂಡರ್ ಕೊಟ್ಟರೂ ಸಹ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ನೂತನ ಗೇಟ್‌ಗಳನ್ನು ತಯಾರಿಸಿ ಅಳವಡಿಸಲು ಅನುಕೂಲವಾಗುತ್ತದೆ. ಈಗಾಗಲೇ ಜಲಾಶಯದಲ್ಲಿ 21 ಟಿ.ಎಂ.ಸಿ. ನೀರು ಶೇಖರಣೆಯಾಗಿದೆ. ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಬರುತ್ತಿದೆ. ಜಲಾಶಯದ ಗೇಟುಗಳು ಗುಣಮಟ್ಟವಿಲ್ಲದ ಕಾರಣ ಈ ವರ್ಷ ಶೇ.80ರಷ್ಟು ಮಾತ್ರ ನೀರು ಭರ್ತಿ ಮಾಡಬೇಕು ಎಂದು ಹೇಳುತ್ತಿದ್ದಿರಿ. ಹಾಗಾದರೆ ಜಲಾಶಯದಲ್ಲಿ 25 ಟಿಎಂಸಿ ನೀರು ಶೇಖರಣೆಯಾದ ತಕ್ಷಣ ಕಾಲುವೆಗಳಿಗೆ ನೀರು ಬಿಟ್ಟರೆ, ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಸಂರಕ್ಷಣೆಯಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಲಸಂಪನ್ಮೂಲ ಸಚಿವರ ಮತ್ತು ಕಾರ್ಯದರ್ಶಿಗಳ ಸಭೆ ಕರೆದು, ಮುಂದಿನ ವರ್ಷ ಮಾರ್ಚ್ ತಿಂಗಳ ವರೆಗೆ ರೈತರಿಗೆ ಎರಡು ಬೆಳೆಗಳಿಗೆ ನೀರು ಕೊಟ್ಟು ನಂತರದ ಏಪ್ರೀಲ್, ಮೇ, ಮತ್ತು ಜೂನ್ ತಿಂಗಳುಗಳಲ್ಲಿ ನೂತನ ಗೇಟ್‌ಗಳನ್ನು ಅಳವಡಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ, ಕೊಂಚಗೇರಿ ದೊಡ್ಡ ಮಲ್ಲಪ್ಪ, ದರೂರ್ ಎಂ.ವೀರಭದ್ರನಾಯಕ, ಎಂ.ರಾಮಾAಜಿನಿನಾಯಕ, ಕುರುಬರ ಗಾದಿಲಿಂಗಮೂರ್ತಿ, ಅಂಗಡಿ ರಾಜಾಗೌಡ, ಬಸವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net