ಟಿಬಿ ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹರಿದರೆ ಹಂಪಿ ಸ್ಮಾರಕಗಳು ಮುಳುಗಡೆ

17082020 Hospet TB Dam
Published on

ಹೊಸಪೇಟೆ: ಒಳಹರಿವು ಹೆಚ್ಚಳದ ಪರಿಣಾಮ ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಒಂದು ಲಕ್ಷ ಕ್ಯೂಸೆಕ್‌ವರೆಗೂ ನದಿಗೆ ನೀರು ಹರಿಯುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ ಹಂಪಿಯ ಪುರಂದರದಾಸರ ಮಂಟಪ ಸೇರಿ ಅನೇಕ ಸ್ಮಾರಕಗಳು, ಕಂಪ್ಲಿ ಸೇತುವೆ ಮುಳುಗುತ್ತವೆ.

ಜಲಾಶಯದಲ್ಲಿ ಈಗಾಗಲೇ 1632.48 ಅಡಿ (ಗರಿಷ್ಟಮಟ್ಟ 1633) ನೀರು ಹರಿದುಬಂದಿದ್ದು, ಹೆಚ್ಚುವರಿ ನೀರನ್ನು 10 ಕ್ರಸ್ಟ್ ಗೇಟ್‌ಗಳ ಮೂಲಕ ಎರಡು ಅಡಿ ಎತ್ತರಕ್ಕೇರಿಸಿ ನದಿಗೆ 32,288 ಕ್ಯೂಸೆಕ್ ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾದಂತೆ ನದಿಗೆ ಬಿಡುವ ನೀರಿನ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net