ಟಿಬಿ ಡ್ಯಾಂನ ಎಲ್ಲ ಕ್ರಸ್ಟ್‌ಗೇಟ್ ಓಪನ್: ನದಿಗೆ 1.40 ಲಕ್ಷ ಕ್ಯೂಸೆಕ್ ನೀರು, ಹಂಪಿ ಪುರಂದರದಾಸರ ಮಂಟಪ ಜಲಾವೃತ

26072021 Hosapet TB Dam Water Relese
Published on

ಹೊಸಪೇಟೆ: ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸೋಮವಾರ 33 ಕ್ರಸ್ಟ್ ಗೇಟ್‌ಗಳಿಂದ ನದಿಗೆ 1,40,016 ಕ್ಯೂಸೆಕ್ ನೀರು ಬಿಡಲಾಯಿತು.

1633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1631 ಅಡಿ ಸಂಗ್ರಹವಾಗಿದೆ. 100.855 ಟಿಎಂಸಿ ಅಡಿ ಸಾಮರ್ಥ್ಯದ ಪೈಕಿ 94.977 ಟಿಎಂಸಿ ನೀರು ಸಂಗ್ರಹಗೊಂಡಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ 1,71,010 ಕ್ಯೂಸೆಕ್ ಒಳ ಹರಿವು ದಾಖಲಾಗಿದ್ದು, ಜಲಾಶಯದ ಒಟ್ಟು 33 ಗೇಟ್‌ಗಳ ಮೂಲಕ 1,40,016 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಸಿಂಗಟಾಲೂರು ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಹೆಚ್ಚ ನೀರು ನದಿಗೆ ಹರಿಸಿರುವುದರಿಂದ ಹಂಪಿಯ ಚಕ್ರತೀರ್ಥ, ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ಕಾಲುದಾರಿ ಜಲಾವೃತವಾಗಿದೆ. ಅಲ್ಲದೇ, ಕೋದಂಡರಾಮ ದೇವಸ್ಥಾನದ ಆವರಣ ಕೂಡ ಜಲಮಯವಾಗಿದೆ. ನದಿ ಪಾತ್ರದಲ್ಲಿರುವ ಪುರಂದರ ದಾಸರ ಶಿಲಾ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net