ಟ್ಯಾಕ್ಸಿ ಸ್ಟ್ಯಾಂಡ್ಗೆ ಅನುಮತಿ ನೀಡಿ

11 MANJU 02
Published on

ಹೊಸಪೇಟೆ: ಟ್ಯಾಕ್ಸಿ ಸ್ಟಾö್ಯಂಡ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದಿಂದ ತಾಲೂಕಿನ ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಬಿಳಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ವಿಶ್ವ ಪ್ರಸಿದ್ಧ ಹಂಪಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶದ ಪ್ರವಾಸಿಗರು ಪಟ್ಟಣದ ಮೂಲಕವೇ ಬರುತ್ತಾರೆ. ಹಂಪಿ ಒಂದು ದಿನದಲ್ಲಿ ರವಾಸ ಮಾಡಲು ಸಾಧ್ಯವಿಲ್ಲ. ವಾಹನಗಳಿಲ್ಲದೇ ಬಸ್‌ಗಳಲ್ಲಿ ಬಂದ ಪ್ರವಾಸಿಗರು ಟ್ಯಾಕ್ಸಿಗಳನ್ನು ಹುಡುಕುವುದೇ ಅವರ ಕಾಯಕವಾಗಿದೆ. ಇದರಲ್ಲೇ ಸಮಯ ವ್ಯಾರ್ಥವಾಗುತ್ತಿದೆ. ಇನ್ನೂ ಟ್ಯಾಕ್ಸಿ ಚಾಲಕರು ಪ್ರವಾಸೋದ್ಯಮವನ್ನು ಬಂಬಿಕೊAಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಟ್ಯಾಕ್ಸಿ ಚಾಲಕರಿಗೂ ಹಾಗೂ ಪ್ರವಾಸಿಗರಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಪಟ್ಟಣದ ಹೊಸ ಬಸ್ ತಂಗುದಾಣದ ಟ್ಯಾಕ್ಸಿ ವಾಹನ ನಿಲುಗಡೆಗೆ ಅನುಮತಿ ನೀಡಬೇಕು. ಇದಂದ ಟ್ಯಾಕ್ಸಿ ಚಾಲಕರಿಗೂ ದುಡಿಯಲು ಸಹಕಾರಿ ಆಗಲಿದೆ. ಹಾಗೂ ಪ್ರವಾಸಿಗರಿಗೂ ಅನುಕೂಲ ಆಗಲಿದೆ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ನಾಗವರ ಪ್ರಸಾದ್, ಹೋಬಳಿ ಘಟಕ ಅಧ್ಯಕ್ಷ ವಿನೋದ್ ಕುಮಾರ್, ಉಪಾಧ್ಯಕ್ಷ ವಿರಭದ್ರಾ ನಾಯಕ, ಪ್ರಮುಖರಾದ ಹೂಗಾರ ಮಲ್ಲಿಕಾರ್ಜುನ, ನರಸಿಂಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net