ಬೈಕ್ ಟ್ಯಾಕ್ಸಿ ಯೋಜನೆ ಕೈಬಿಡಿ,

18 MANJU 04
Published on

ಹೊಸಪೇಟೆ: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿಗೆ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ (ಎಫ್‌ಕೆಎಆರ್‌ಡಿಯು) ಸಂಘಟನೆಯಿAದ ಹಂಪಿ ಹಾಗೂ ನಗರದಲ್ಲಿ ಪತ್ರ ಚಳುವಳಿ ನಡೆಯಿತು.

ಸಂಘಟನೆ ರಾಜ್ಯ ಸಂಚಾಲಕ ಕೆ.ಎಂ.ಸAತೋಷ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಖಾಸಗಿ ಕಂಪನಿಗಳಿಗೆ ಅಗ್ರಿಗೇಟರ್ ಪರವಾನಿಗೆ ನೀಡಲು ಮುಂದಾಗಿದೆ. ಎಫ್‌ಕೆಎಆರ್‌ಡಿಯು ಉಚ್ಛ ನ್ಯಾಯಾಲಯದಲ್ಲಿ ಮೊರೆ ಹೋಗಿದೆ. ಆದರೆ, ಖಾಸಗಿ ಕಂಪನಿಗಳ ಪರವಾಗಿ ವರದಿ ನೀಡಲು, ರಾಜ್ಯ ಸರ್ಕಾರ 11 ಜನರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚನೆ ಮಾಡಿದೆ. ಉನ್ನತ ಅಧಿಕಾರಗಳು ಯಾವುದೇ ತಳ ಸಮುದಾಯದಿಂದ ಬಂದ ವ್ಯಕ್ತಿಗಳಲ್ಲ. ಇದರಲ್ಲಿ ನಮ್ಮ ಆಟೋ ಚಾಲಕರಿಗೆ ಅನ್ಯಾಯಾ ಆಗಲಿದೆ ಎಂದು ಆಗ್ರಹಿಸಿದರು.

ಆದ್ದರಿಂದ ರಾಜ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿU ಸಿದ್ದರಾಮಯ್ಯಗೆ 1 ಲಕ್ಷ ಪತ್ರ ಕಳಿಸಲಾಗುತ್ತಿದೆ. ಸೆ.20 ರಂದು ರಾಜ್ಯದ ಸಾರಿಗೆ ಇಲಾಖೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಸಂಘಟನೆಯಿAದ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ಈ ಹೋರಾಟಕ್ಕೆ ಸರ್ಕಾರ ಮಣಿಯದೇ ಇದ್ದಲ್ಲಿ ಉಗ್ರಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು

ಪ್ರಮುಖರಾದ ಅನಂತಶಯನ, ರಾಘವೇಂದ್ರ, ವಿರುಪಾಕ್ಷಿ, ಚನ್ನಬಸವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net