ಹೊಸಪೇಟೆಯಲ್ಲಿ 78ನೇ ಸ್ವಾತಂತ್ರೋತ್ಸವ

Published on

ಹೊಸಪೇಟೆ: ಜಿಲ್ಲಾಡಳಿತದಿಂದ 78ನೇ ಸ್ವಾತಂತ್ರತ್ಸವ ದಿನಾಚರಣೆ ಕಾರ್ಯಕ್ರಮ ಆ.15ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು.

ಶಾಸಕ ಎಚ್. ಆರ್. ಗವಿಯಪ್ಪ ಅಧ್ಯಕತೆ ವಹಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಪಥ ಸಂಚಲನ ಮತ್ತು ಕವಾಯತ್ ತಂಡಗಳ ಸೇರ್ಪಡೆ, 8.55ಕ್ಕೆ ಕ್ರೀಡಾಂಗಣಕ್ಕೆ ಮುಖ್ಯ ಅತಿಥಿಗಳ ಆಗಮನ, 9 ಗಂಟೆಗೆ ಧ್ವಜಾರೋಹಣ ಮತ್ತು ರಾಷ್ಟçಗೀತೆ. 9.05ಕ್ಕೆ ಪರೇಡ್ ವೀಕ್ಷಣೆ, 9.20ಕ್ಕೆ ಗೌರವ ಸ್ವೀಕಾರ ಮತ್ತು ಪಥ ಸಂಚಲನ. 9.40ಕ್ಕೆ ಸ್ವಾತಂತ್ರ್ಯೋತ್ಸವ ಸಂದೇಶ, 9.55ಕ್ಕೆ ಪಥ ಸಂಚಲನದಲ್ಲಿ ಭಾಗವಹಿಸಿದ ತುಕಡಿಗಳ ವಿಸರ್ಜನೆ, 10 ಗಂಟೆಗೆ ಶಿಕ್ಷಣ ಇಲಾಖೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು 10.45ಕ್ಕೆ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net