

ಹೊಸಪೇಟೆ: ತಾಲೂಕಿನ ಗಾದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವ್ವಾಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನಕ್ಕೆ ವೈದ್ಯೆ ಡಾ.ದಿವ್ಯಾಶ್ರೀ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಒತ್ತಡದ ಬದುಕಿನಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷಿಸುತ್ತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅನೇಕ ಆರೋಗ್ಯ ಸೇವೆಗಳು ಲಭ್ಯತೆಗಳಿವೆ. ಸರ್ಕಾರದ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಪಡೆಯಲು ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ಪರೀಕ್ಷೆ ಮತ್ತು ಆರೋಗ್ಯ ಸೇವೆಗಳಾದ ಕಿವಿ, ಕಣ್ಣು, ಮೂಗು ಮತ್ತು ಗಂಟಲು, ರಕ್ತದೊತ್ತಡ, ಕ್ಯಾನ್ಯರ್-ಬಾಯಿ, ಸ್ತನ, ಗರ್ಭಾಶಯ ಪರೀಕ್ಷೆ ಮತ್ತು ಲಸಿಕೆ ಸೇವೆಗಳು, ರಕ್ತಹೀನತೆ ಮಟ್ಟ ಹಾಗೂ ಕ್ಷಯರೋಗ ಪರೀಕ್ಷೆಗಳನ್ನು ಪಡೆಯಬಹುದಾಗಿದೆ. ಒಬ್ಬ ಆರೋಗ್ಯವಂತ ಮಹಿಳೆ ತನ್ನ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಾಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ಅರೋಗ್ಯ ಶಿಕ್ಷಣಧಿಕಾರಿ ಎಂ.ಪಿ. ದೊಡಮನಿ, ಪ್ರಮುಖರಾದ ಗೋಪಾಲ, ಸುರೇಂದ್ರ, ಪೂರ್ಣಿಮಾ, ಭವ್ಯಾ ಇತರರಿದ್ದರು.