ಹೊಸಪೇಟೆ: ನಾಲ್ಕು ದಿನದಿಂದ ಕಾಣೆಯಾಗಿದ್ದ ಇಲ್ಲಿನ ಹೊಸ ಅಮರಾವತಿ ಬಡಾವಣೆ ನಿವಾಸಿ ಗೋಪಾಲಕೃಷ್ಣ (60) ಅನುಮಾನಾಸ್ಪದವಾಗಿ ಮೃತರಾಗಿದ್ದಾರೆ. ಮೇನ್ ಬಜಾರ್‌ನಲ್ಲಿರುವ ಪಾಂಡುರಂಗ ದೇಗುಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಗೋಪಾಲಕೃಷ್ಣ ಕಾಣೆಯಾಗಿದ್ದರು. ನಗರದ ಮೇನ್ ಬಜಾರ್‌ನ ಕೊಳೆತ ವಾಸನೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾ ಪಾಳು ಬಿದ್ದ ಬಿಲ್ಡಿಂಗ್‌ನಲ್ಲಿ ಶವ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು. ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಸವಣ್ಣ ಕಾಲೂವೆಯಲ್ಲಿ ಇಲ್ಲಿನ ಎಸ್.ಆರ್.ನಗರದ ಮಾನಸಿಕ ಅಸ್ವಸ್ಥತೆ ಮೀನಾಕ್ಷಮ್ಮ (40) ಶನಿವಾರ ಪತ್ತೆಯಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆಯಿಂದ ಕಾಲೂವೆ ಸ್ವಚ್ಛತೆ ಮಾಡುವ ವೇಳೆ ಮಹಿಳೆಯ ಶವ ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥತೆ ಇರುವುದರಿಂದ ಶುಕ್ರವಾರ ಕಾಲೂ ಜಾರಿ ಕಾಲುವೆಗೆ ಬಿದ್ದರ ಬಹುದು ಎಂದು ಪೊಲೀಸರು ತಿಳಿಸಿದರು.