ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತರಣೆ

Published on

ಹೊಸಪೇಟೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮೀಕ್ಷೆ ಸಂಬAಧಿಸಿದAತೆ ಸಮೀಕ್ಷೆ ಆಗದೆ ಬಾಕಿ ಉಳಿದ ಮನೆಗಳ ಗಣತಿಯನ್ನು ಮಾಡಲು ಅವಧಿಯನ್ನು ಅ.31 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ತಿಳಿಸಿದ್ದಾರೆ.

ತಾಲೂಕಿನಲ್ಲಿ ಬಹುತೇಕ ಮನೆಗಳ ಗಣತಿ ಕಾರ್ಯ ಪೂರ್ಣಗೊಂಡಿರುತ್ತದೆ ಆದರೆ, ಇನ್ನೂ ಕೆಲವು ಮನೆಗಳ ಮತ್ತು ಕುಟುಂಬದಲ್ಲಿ ಕೆಲವು ಸದಸ್ಯರನ್ನು ಬಿಟ್ಟು ಹೋಗಿದ್ದಲ್ಲಿ ಅಂತಹ ಕುಟುಂಬದ ಸದಸ್ಯರ ಕುಟುಂಬದ ಸಮೀಕ್ಷೆಯು ಆಗದೆ ಬಾಕಿ ಉಳಿದ ಅಂತಹ ಕುಟುಂಬದ ಮನೆಗಳ ಮಾಲೀಕರು ಸ್ಥಳೀಯ ಕಚೇರಿಗಳ ದೂರವಾಣಿ, ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬೇಕು. ಅಂತಹ ಮನೆಗಳ ಗಣತಿದಾರರು ಖುದ್ದಾಗಿ ಬಂದು ಮನೆಗಳ ಸಮೀಕ್ಷೆಯನ್ನು ಮಾಡಿಕೊಂಡು ಹೋಗಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ತಹಸೀಲ್ ಕಚೇರಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಸಂಪರ್ಕಿಸ ಬಹುದಾದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net