

ಹೊಸಪೇಟೆ: ವಿವಿಧ ಇಲಾಖೆಗಳಲ್ಲಿ ಸಬ್ಸಿಡಿ ಸಾಲ ಕೊಡಿಸುತ್ತೇನೆ ಎಂಬ ನಂಬಿಕೆಯನ್ನು ಹುಟ್ಟುಹಾಕಿ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಬಿ.ಎಚ್.ಕುಮಾರ ಸ್ವಾಮಿ ಎಂಬುವರು ವಿಜಯನಗರ ಜಿಲ್ಲೆಯಲ್ಲಿ 240ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಹರಪನಹಳ್ಳಿ ತಾಲೂಕಿನ ನಂದಿಬೇವುರಿನ ಅಲ್ಲಭಕ್ಷಿ ಅವರು ಕೊಟ್ಟೂರು, ಹರಪನಹಳ್ಳಿ, ಚಿತ್ರದುರ್ಗ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಿತ್ರದುರ್ಗದ ಎಡಬ್ಲೂö್ಯಪಿಎಲ್ ಖಾಸಗಿ ಆಯುರ್ವೇಧ ಕಂಪನಿಯಲ್ಲಿ ಅಲ್ಲಭಕ್ಷಿ ಕೆಲ ಮಾಡುತ್ತಿದ್ದರು. ಕೆಲಸದ ನಿಮಿತ್ತ ಚಿತ್ರದುರ್ಗಕ್ಕೆ ಹೋಗುವಾಗ ಕುಮಾರ ಸ್ವಾಮಿ ಪರಿಚಯವಾಗಿದ್ದರು. ಸರ್ಕಾರಿ ಇಲಾಖೆಗಳ ವಿವಿಧ ವಿಭಾಗಗಳಲ್ಲಿ ನಾನಾ ಜನಂಗದವರಿಗೆ ಸಬ್ಸಿಡಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿದರು. ಕೊಟ್ಟೂರು, ಹರಪನಹಳ್ಳಿ ಸೇರಿದಂತೆ ವಿವಿಧ ಕಡೆ ಜನರಿಗೆ ಭರವಸೆ ಮೂಡುವಂತ ಸನ್ನಿವೇಶಗಳನ್ನು ಮಾಡಿ 240 ಜನರಿಂದ ತಲ 5 ಸಾವಿರ ದಿಂದ 15 ಸಾವಿರದ ವರೆಗೆ ಒಟ್ಟು 21 ಲಕ್ಷ ರೂ. ವರೆಗೆ ನೀಡಿ ಮೋಸಕ್ಕೆ ಬಲಿಯಾಗಿದ್ದಾರೆ. ಈ ವಂಚನೆಯ ಬಗ್ಗೆ ಕುಮಾರಸ್ವಾಮಿ ಹಣ ಪಡೆಯುತ್ತಿರುವ ಪೋಟೋ ವಿಡಿಯೋಗಳು ಸೇರಿದಂತೆ ಸಾಕ್ಷ್ಯವನ್ನೂ ರಾಜಸಾಬ್ ಬಿಡುಗಡೆ ಮಾಡಿದ್ದಾರೆ. ಕೋಟಿ ಕೋಟಿ ವಂಚನೆ ಆಗಿರಬಹುದು ಎಂದು ಆರೋಪಿಸಲಾಗಿದೆ.
ಸಬ್ಸಿಡಿ ಸಾಲ ಕೊಡಿಸುವ ವಂಚನೆ ಪ್ರಕರಣ ಅಲ್ಲಭಕ್ಷಿಯವರ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಚಿತ್ರದುರ್ಗದಲ್ಲಿ ಕೂಡ ಇವರು ದೂರು ದಾಖಲಿಸಿದ್ದಾರೆ. ಆದ್ದರಿಂದ ಚಿತ್ರದುರ್ಗ ಪೊಲೀಸ್ ಠಾಣೆಗೆ ಪ್ರಕರಣ ವರ್ಗಯಿಸಲಾಗಿದೆ. ಬಿ.ಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ