

ಹೊಸಪೇಟೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ, ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ವಿಶೇಷ ಅಭಿಯಾನ ಇಂದಿನಿಂದ ನಡೆಯುತ್ತಿದೆ.
ಕಳೆದ ಎರಡು ತಿಂಗಳಿಂದ ಬೇಸಿಗೆ ರಜೆಯನ್ನು ಅನುಭವಿಸಿದ ಮಕ್ಕಳು ಮರಳಿ ಶಾಲೆಗೆ ಬರಲಿದ್ದಾರೆ. ಜಿಲ್ಲೆಯಲ್ಲಿ ಬುಧವಾರದಿಂದ ಶಾಲಾರಂಭವಾಗಿದೆ. ಮೇ.31ಕ್ಕೆ ಶಾಲೆಗಳನ್ನು ತಳಿರು ತೋರಣ ಕಟ್ಟಿ ವಿಶೇಷವಾಗಿ ಸಿಂಗರಿಸಿ, ಮಕ್ಕಳನ್ನು ಆಹ್ವಾನಿಸಿ ಸಿಹಿಯೂಟ ನೀಡುವ ಮಕ್ಕಳನ್ನು ಸ್ವಾಗತಿಸಲಿದ್ದಾರೆ. ಮೊದಲನೇ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.
ಈಗಾಗಲೇ ಮೇ.28ರ ವರೆಗೆ ಒಟ್ಟು 58,114 ಮಕ್ಕಳ ದಾಖಲಾತಿ ಆಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಎಲ್ಲ ಸೇರಿ 1,715 ಶಾಲೆಗಳಲ್ಲಿ 2.75 ವಿದ್ಯಾರ್ಥಿಗಳಿದ್ದರು. ಈ ಪೈಕಿ 977 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 132 ಪ್ರೌಢಶಾಲೆಗಳಿವೆ. ಈ ಬಾರಿ ಹೆಚ್ಚಿನ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆ ದಾಖಲಾತಿ ಅಭಿಯಾನ ಹಮ್ಮಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಬುಧವಾರದಿಂದ ಶಾಲೆ ಆರಂಭವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಕೂಡ ಆರಂಭವಾಗಿದೆ. ಮೇ.31ರಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತಿಸಲು ಶಾಲೆಗಳಿಗೆ ತೋರಣ ಸೇರಿದಂತೆ ಇತರೆ ಅಲಂಕಾರ ಮಾಡಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಲಿದ್ದಾರೆ.
...ಕೋಟ್....
ಜಿಲ್ಲೆಯಲ್ಲಿ ಮೇ 29ರಂದು ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮೇ.31ರಂದು ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳಿಗೆ ಸಿಹಿ ನೀಡಿ ಶಾಲೆಗೆ ಸ್ವಾಗತಿಸಲಾಗುವುದು. ಯುವರಾಜನಾಯ್ಕ, ಡಿಡಿಪಿಐ, ವಿಜಯನಗರ.