ಕಾಲಾವಕಾಶ ನೀಡಿ ಪರೀಕ್ಷೆ ನಡೆಸಿ

05022022 Hospet aidso protest
Published on

ಹೊಸಪೇಟೆ: ಪರೀಕ್ಷೆ ತಯಾರಿಗೆ ಕಾಲಾವಕಾಶ ನೀಡಿದ ನಂತರ ಪದವಿ ಪರೀಕ್ಷೆ ದಿನಾಂಕ ನಿಗದಿಪಡಿಸುವಂತೆ ಒತ್ತಾಯಿಸಿ ನಗರದ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಉಪನ್ಯಾಸಕ ನಟರಾಜ್ ಮೂಲಕ ಪ್ರಾಚಾರ್ಯ ಬಿ.ಜಿ.ಕನಕೇಶಗೆ ಶನಿವಾರ ಮನವಿ ಸಲ್ಲಿಸಿದರು.

ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗುರಳ್ಳಿ ರಾಜ ಮಾತನಾಡಿ, ಕರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ಕಳೆದ ಶೈಕ್ಷಣಿಕ ವರ್ಷ ಗೊಂದಲದಲ್ಲೇ ಕಳೆದಿದೆ. ಈ ವರ್ಷವೂ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕ ನಡೆಯದಿಲ್ಲ. ಇದರಿಂದ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಪ್ರಸಕ್ತ ವರ್ಷ ಪಠ್ಯಪುಸ್ತಕಗಳನ್ನೂ ತಡವಾಗಿ ನೀಡಲಾಗಿದೆ. ಅತಿಥಿ ಉಪನ್ಯಾಸಕರು ಹೋರಾಟ ನಡೆಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಸರ್ಕಾರಿ ಕಾಲೇಜುಗಳಲ್ಲಿ ಪಠ್ಯಕ್ರಮದ ಶೇ.30 ರಿಂದ ಶೇ.50 ಪಾಠಗಳು ನಡೆದಿವೆ. ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ಮೊದಲನೇ ಆಂತರಿಕ ಪರೀಕ್ಷೆಗಳು ಮುಗಿದು, ಫೆಬ್ರವರಿ ಕೊನೆಯಲ್ಲಿ ಸೆಮಿಸ್ಟರ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸರಿಯಾಗಿ ಪಾಠಗಳೇ ನಡೆಯದೆ, ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬ ಆತಂಕದಲ್ಲಿದ್ದಾರೆ ವಿದ್ಯಾರ್ಥಿಗಳು. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ತಯಾರಿಗೆ ಅವಕಾಶ ನೀಡಿದ ಬಳಿಕ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net