ರಾಜ್ಯ ಸರ್ಕಾರ ಬೆಲೆ ಏರಿಕೆ, ಭ್ರಷ್ಟಾಚಾರ ತಡೆಯಲಿ

news
ಕೆ.ಭಾಸ್ಕರ್ ರೆಡ್ಡಿ
Published on

ಹೊಸಪೇಟೆ: ರಾಜ್ಯದಲ್ಲಿ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ತಡೆಯಲು ಕ್ರಮವಹಿಸಬೇಕು ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಭಾಸ್ಕರ್ ರೆಡ್ಡಿ ಮಂಗಳವಾರ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಆದಾಯವನ್ನು ಹೆಚ್ಚಿಸಿಕೊಳ್ಳಲು ಜನತೆಯ ಮೇಲೆ ವ್ಯಾಪಕವಾದ ಬೆಲೆ ಏರಿಕೆ ಹೇರಿದೆ. ಕರಭಾರದ ಹೊರೆಯನ್ನು ಹೇರುವ ಮತ್ತು ಸಾರ್ವಜನಿಕ ಭೂಮಿ ಸೇರಿದಂತೆ ಇತರೆ ಆಸ್ತಿ ಮಾರಾಟಕ್ಕೆ ಕ್ರಮ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಬರಗಾಲದಿಂದ ತತ್ತರಿಸುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಕೈಬಿಡಬೇಕು. ಕೇಂದ್ರ ಸರ್ಕಾರದಿಂದ ಪಡೆಯ ಬೇಕಾದ ನ್ಯಾಯಯುತ ತೆರಿಗೆ ಪಾಲು ಮತ್ತು ತೆರಿಗೆ ಬಾಕಿ, ಬರ ಪರಿಹಾರದ ಬಾಕಿ ಪಡೆಯಲು ಮುಂದಾಗಬೇಕು. ದೊಡ್ಡ ಬಂಡವಾಳದಾರರಿಗೆ ನೀಡುವ ಸಹಾಯಧನ ಕಡಿತ, ಶ್ರೀಮಂತರ ಮೇಲೆ ತೆರಿಗೆಗೆ ಕ್ರಮವಹಿಸಬೇಕು. ಅದೇ ರೀತಿ, ಸಮುದಾಯ ಅಭಿವೃದ್ಧಿ ನಿಗಮ,ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net