ಶಿಕ್ಷಣದ ಜತೆಗೆ ಕೌಶಲ್ಯ ನೈಪುಣ್ಯತೆ ಅಗತ್ಯ

16 MANJU 02
Published on

ಹೊಸಪೇಟೆ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಕೋರ್ಸ್ಗಳ ಅಧ್ಯಯನ ಮಾಡುವುದರಿಂದ ಕೌಶಲ್ಯ ನೈಪುಣ್ಯತೆ ವೃದ್ಧಿಯಾಗಲಿದೆ ಎಂದು ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲ ಡಿ.ಅಂಜನ್ ಕುಮಾರ್ ಹೇಳಿದರು.

ಹಗರಿಬೊಮ್ಮನಹಳ್ಳಿಯ ವಾಲ್ಮೀಕಿ ಭವನದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿAದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ನಂತರ ಮುಂದೇನು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

1972ರಲ್ಲಿ ಡೆನ್ಮಾರ್ಕ್ ಸರ್ಕಾರ ಮತ್ತು ಭಾರತ ಸರ್ಕಾರದ ಸಹಯೋಗದೊಂದಿಗೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆಯಾಯಿತು. ಹೊಸಪೇಟೆ ಕೇಂದ್ರವು 1996 ರಲ್ಲಿ ಸ್ಥಾಪನೆಯಾಗಿ ಪ್ರಸ್ತುತ ಮರಿಯಮ್ಮನಹಳ್ಳಿ ಸುವ್ಯವಸ್ಥಿತ ತಾಂತ್ರಿಕ ಅಧ್ಯಯನ ಮತ್ತು ಉತ್ತಮ ಬೋಧನೆಯನ್ನು ನಡೆಸಲಾಗುತ್ತಿದೆ ಎಂದರು.

ಸAಪನ್ಮೂಲ ವ್ಯಕ್ತಿ ಅಕ್ಕಿ ಬಸವರಾಜ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಪಿಯುಸಿಯಲ್ಲಿ ವಿಷಯಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಪದವಿ ಶಿಕ್ಷಣದಲ್ಲಿ ಪ್ರತ್ಯೇಕ ವಿಷಯಗಳಲ್ಲಿ ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಸ್ನಾತಕ ಪದವಿಗಳನ್ನು ಪಡೆಯಬಹುದಾಗಿದೆ. ಬೋಧಕ, ಬೋಧಕೇತರ ಹುದ್ದೆಗಳಿಗೆ ಪದವಿ ಮತ್ತು ಸ್ನಾತಕ ಪದವಿಗಳು ಸಹಕಾರಿಯಾಗಲಿವೆ. ಅಷ್ಟಲ್ಲದೇ ಆಡಳಿತಾತ್ಮಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪದವಿ ಶಿಕ್ಷಣ ತುಂಬಾ ಅಗತ್ಯವಿದೆ. ತಾಂತ್ರಿಕ ಕೋರ್ಸ್ಗಳÀನ್ನು ಅಧ್ಯಯನದಿಂದ ಖಾಸಗಿ ಕಂಪನಿ ಸೇರಿದಂತೆ ಸರ್ಕಾರಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿರುತ್ತವೆ. ಅಷ್ಟಲ್ಲದೇ ಬ್ಯಾಂಕಿAಗ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ವಾಣಿಜ್ಯ ಪದವಿಗಳು ಸಹಕಾರಿಯಾಗಲಿವೆ. ಕೃಷಿ, ಕೈಗಾರಿಕೆ, ವೈದ್ಯಕೀಯ ಶಿಕ್ಷಣ, ಅರಣ್ಯ, ಪಶು ಸಂಗೋಪನೆ ಕ್ಷೇತ್ರದಲ್ಲಿ ವಿಜ್ಞಾನ ವಿಷಯದ ಪದವಿ ಸಹಕಾರಿ. ಇಂಜಿನಿಯರಿAಗ್ ಪದವಿ ಸ್ವಾವಲಂಬಿಯಾಗಿ ಕೌಶಲ್ಯ ಶಿಕ್ಷಣ ನೀಡುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಅಕ್ಕಿ ಬಸವರಾಜ, ವಿ.ಎಂ.ಗವಿಸಿದ್ದೇಶ್, ಟಿ.ಮಂಜುನಾಥ, ತೇಜಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net