ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಕ್ರೀಯಾಶೀಲರಾಗಿ

11 MANJU 05
Published on

ಹೊಸಪೇಟೆ: ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಕ್ರಿಯಾಶೀಲರಾದಷ್ಟು ಫಲಿತಾಂಶ ಹೆಚ್ಚು ಬರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಜಿಲ್ಲಾ ಸಂಘ ಸಹಯೋಗದಲ್ಲಿ ನಗರದ ಒಳಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಸೋಮವಾರ ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಮುಖ್ಯಶಿಕ್ಷಕರು ಶಾಲೆಗಳಲ್ಲಿ ನಿರಾಸಕ್ತಿ ವಹಿಸಿದರೇ ಸಹಶಿಕ್ಷಕರು ಫಲಿತಾಂಶದ ಬಗ್ಗೆ ಗಮನಹರಿಸಲು ಸಾಧ್ಯವಿಲ್ಲ. ಹೊಸಪೇಟೆ ಶಾಲೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಫಲಿತಾಂಶ ಕುಸಿದಿದೆ ಎಂದು ಕಾರಣ ನೀಡಲಾಗಿತ್ತು. ಆದರೆ, ಇದು ಒಪ್ಪಲಾಗದು, ಹೆಚ್ಚು ಸಿಬ್ಬಂದಿಗಳನ್ನು ನೀಡಿರುವ ಹೊಸಪೇಟೆ ತಾಲೂಕು ಶಿಕ್ಷಕರ ಕೊರತೆಗೂ, ಫಲಿತಾಂಶ ಕುಸಿತಕ್ಕೂ ಸಂಬಂಧವಿಲ್ಲ. ಯಾವುದೇ ಶಾಲೆಯಲ್ಲಿ ವಿಷಯ ಶಿಕ್ಷಕರ ಕೊರತೆ ಇದ್ದರೇ, ಮಾಹಿತಿ ನೀಡಿ ಪರಿಶೀಲಿಸಿ ಶೀಘ್ರವೇ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು.

ಜಿಲ್ಲೆಯ ಫಲಿಶಾಂಶ ಹೆಚ್ಚಿಸಲು ಹೆಚ್ಚು ನಿರೀಕ್ಷೆಯಿದೆ. ಅದೇ ರೀತಿ ನಿಮ್ಮ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡಲು ಕೇಳುವ ಹಕ್ಕು ನಿಮಗಿದೆ. ಜಿಲ್ಲೆಯ ಒಂದೂ ಶಾಲೆಯು ಸಹ ಸೋರದಂತೆ ಕ್ರಮವಹಿಸಲು ಕಾರ್ಯೋನ್ಮೋಖರಾಗಿದ್ದೇವೆ. ಅಷ್ಟೇ ಅಲ್ಲ ಅಗತ್ಯವಿದ್ದರೆ ಹೊಸ ಕೊಠಡಿಗಳ ನಿರ್ಮಾಣ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ವಿಶೇಷವಾದ ಅನುದಾನಗಳನ್ನು ನೀಡಲಾಗಿದೆ. ಶಾಲೆಗಳನ್ನು ಸಹ ಶಿಕ್ಷಕರು, ಮುಖ್ಯಶಿಕ್ಷಕರು ಸಹಕಾರ ನೀಡಬೇಕು. ಎಲ್ಲಾ ಮುಖ್ಯಶಿಕ್ಷಕರಿಗೆ ತುಂಬಾ ಅನುಭವವಿದೆ. ಶಾಲೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಕೌಶಲ್ಯ ನಿಮ್ಮಲ್ಲಿದೆ. ನಿಮಗೆ ಕೌಶಲ್ಯ ಅಭಿವೃದ್ಧಿ ಅಗತ್ಯವಿಲ್ಲ. ಆದರೆ ಫಲಿತಾಂಶ ಕುರಿತು ಚಿಂತನ, ಮಂಥನ ಮಾಡುವ ಸಭೆ ಇದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net