ಜೋಗಿ ಕಾಮನ್‌ ಮ್ಯಾನ್‌ ಮುಹೂರ್ತ

03 MANJU 07
Published on

ಹೊಸಪೇಟೆ: ಶಿವರಾಜ್‌ ಕುಮಾರ ಅವರು ಜೋಗಿ ಚಿತ್ರದ ಮೂಲಕ ಇಡೀ ಜಗತ್ತಿಗೆ ಪರಿಚಯ ಆಗಿದ್ದಾರೆ. ಜೋಗಿ ಕಾಮನ್‌ ಮ್ಯಾನ್‌ ಚಿತ್ರ ಕೂಡ ಅಷ್ಟೇ ಜನಪ್ರಿಯತೆ ಗಳಿಸಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಜೋಗಿ ಕಾಮನ್‌ ಮ್ಯಾನ್‌ ಚಿತ್ರದ ಮುಹೂರ್ತಕ್ಕೆ ಕ್ಲಾಪ್‌ ಮಾಡುವ ಮೂಲಕ ಗುರುವಾರ ಚಾಲನೆ ನೀಡಿದ ಅವರು, ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯ ಹುಡುಗರೇ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಭಾಗದ ಹುಡುಗರು ಕೂಡ ಬೆಳೆಯಬೇಕು. ಗ್ರಾಮೀಣ ಪ್ರದೇಶದ ಯುವಕರಲ್ಲೂ ಪ್ರತಿಭೆ ಇದೆ. ಇವರ ಪ್ರತಿಭೆ ಅನಾವರಣಕ್ಕೆ ಇದೊಂದು ಸುವರ್ಣ ಅವಕಾಶ ಆಗಿದೆ ಎಂದರು.

ಹೊಸಪೇಟೆ ಹುಡುಗ ಜೋಗಿ ತಾಯಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ. ಅವರ ಯಶಸ್ವಿಗೆ ಎಲ್ಲರೂ ಸಾಥ್ ನೀಡಬೇಕು. ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಇದೊಂದು ಸುಂದರ ಚಿತ್ರವಾಗಿ ಮೂಡಿ ಬರಲಿ ಮತ್ತು ಯಶಸ್ವಿ ಕಾಣಲಿ ಎಂದು ಹಾರೈಸಿದರು. ನಿರ್ದೇಶಕ ಜೋಗಿ ತಾಯಪ್ಪ, ಮುಖಂಡರಾದ ಶ್ಯಾಮ್ ಸಿಂಗ್‌, ವೆಂಕಟೇಶ್‌ ಕಾಟವೆ, ಶ್ರೀಕಂಠ, ಪಿ. ವೆಂಕಟೇಶ್‌, ಗುಜ್ಜಲ ಗಣೇಶ್‌, ದೇವರಮನಿ ಶ್ರೀನಿವಾಸ್‌, ಮಂಜುನಾಥ, ಹನುಮಂತಪ್ಪ ಬುಜ್ಜಿ, ಪ್ರಕಾಶ್‌ ಮೆಹರವಾಡೆ, ಎನ್‌. ವೆಂಕಟೇಶ್‌, ಕಂಪ್ಲಿ ಲಕ್ಷ್ಮಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net