ವಿಶೇಷ ಭತ್ಯೆಗೆ ಆಯುಷ್ ವೈದ್ಯರ ಒತ್ತಾಯ: ಹೊಸಪೇಟೆಯಲ್ಲಿ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರು

01062021 Hosapete Ayush doctor protest
Published on

ಹೊಸಪೇಟೆ: ವಿಶೇಷ ಭತ್ಯೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕ ನಗರದ ಟಿಎಚ್‌ಒ ಕಚೇರಿ ಬಳಿ ಮಂಗಳವಾರ ಕಪ್ಪು ಪಟ್ಟಿ ಧರಿಸಿ ಭಿತ್ತಿಪತ್ರ ಪ್ರದರ್ಶಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ವೇತನ-ಭತ್ಯೆ ಸ್ಥಾನಮಾನಗಳನ್ನು ಆಯುಷ್ ವೈದ್ಯರಿಗೂ ವಿಸ್ತರಿಸುವಂತೆ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೂ ಆಯುಷ್ ವೈದ್ಯರನ್ನು ಬಿಟ್ಟು ವಿಶೇಷ ಭತ್ಯೆ ನೀಡಿರುವುದು ಖಂಡನೀಯ.

ಆದ್ದರಿಂದ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದೇವೆ. ಆದಾಗ್ಯೂ ಆದೇಶ ಹೊರಡಿಸದಿದ್ದಲ್ಲಿ ಜೂ.7 ರಿಂದ ಕೋವಿಡ್ ಸಂಬಂಧಿತ ಎಲ್ಲ ಕೆಲಸಗಳನ್ನು ಬಹಿಷ್ಕರಿಸಿ, ಆಯುಷ್ ಇಲಾಖೆ ಚಿಕಿತ್ಸಾಲಯ, ಆಸ್ಪತ್ರೆಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸಲಾಗುವುದು ಎಂದು ಸಂಘದ ಜಿಲ್ಲಾ ಪ್ರತಿನಿಧಿ ಡಾ.ಪಿ.ಮುನಿವಾಸುದೇವ ರೆಡ್ಡಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net