ಡೇಟಾ ಸರಿಪಡಿಸಲು ಕ್ರಮವಹಿಸಿ

Monsoon
ವಿಜಯನಗರ ಜಿಲ್ಲಾಧಿಕಾರಿ ಕೇಸ್ವನ್ ಹಾಲ್‌ನಲ್ಲಿ ಬುಧವಾರ ಬೆಳೆ ಪರಿಹಾರ ಪ್ರಕ್ರಿಯೆ ಸಭೆ ನಡೆಯಿತು.
Published on

ಹೊಸಪೇಟೆ: ಕಳೆದ ಮುಂಗಾರು ಹಂಗಾಮಿನ ಬೆಳೆಹಾನಿಗೆ ಬೆಳೆ ಪರಿಹಾರದ ಮೊತ್ತ ಸಂದಾಯಕ್ಕೆ ಸಂಬAಧಿಸಿದAತೆ ಹಂತ 1 ರಿಂದ ಹಂತ-9ರವರೆಗೆ ವಿಜಯನಗರ ಜಿಲ್ಲೆಗೆ ಸ್ವೀಕೃತವಾಗಿರುವ ಡಾಟಾವನ್ನು ಕೂಡಲೇ ಸರಿಪಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕೇಸ್ವನ್ ಹಾಲ್‌ನಲ್ಲಿ ಬುಧವಾರ ಬೆಳೆ ಪರಿಹಾರದ ಮೊತ್ತ ಸಂದಾಯದ ಪ್ರಕ್ರಿಯೆಯ ಸಭೆ ನಡೆಸಿದರು.

ಯಾವ ಬಗೆಯ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ ಇನ್ನು ಕೆಲವು ರೈತರ ಖಾತೆಗಳಿಗೆ ಬೆಳೆ ಪರಿಹಾರದ ಮೊತ್ತ ಸಂದಾಯವಾಗಿಲ್ಲ ಎಂಬುದರ ಬಗ್ಗೆ ಮಾಹಿತಿಯ ಡಾಟಾವನ್ನು ಈಗಾಗಲೇ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಕಳುಹಿಸಲಾಗಿದೆ. ಆದ್ದರಿಂದ ಸಂಬAಧಿಸಿದ ಅಧಿಕಾರಿಗಳು ತಮ್ಮ ಹಂತದಲ್ಲಿ ತುರ್ತು ಕ್ರಮವಹಿಸಿ ವರದಿ ನೀಡಬೇಕು ಎಂದರು.

ವಿಜಯನಗರ ಜಿಲ್ಲೆಯಲ್ಲಿ ಬರಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಸಂಬAಧಿಸಿದAತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರುಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾAಶದ ಮೂಲಕ ಹಂತಹAತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಒಟ್ಟು 1,09,543 ರೈತರಿಗೆ 130,08 ಕೋಟಿ ರೂ. ಬಿಡುಗಡೆಯಾಗಿದೆ.

ಬೆಳೆ ಪರಿಹಾರದ ಮೊತ್ತ ಪಡೆಯುವಲ್ಲಿ ಕೆಲವು ರೈತರಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಸರಿಯಾಗಿ ಸಮನ್ವಯ ಮಾಡಬೇಕು ಎಂದರು. ಜAಟಿ ಕೃಷಿ ನಿರ್ದೇಶಕ ರಮೇಶ ಕುಮಾರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಿದಾನಂದ ಪೂಜಾರ್, ಜಿಲ್ಲಾಧಿಕಾರಿ ಕಚೇರಿ ತಹಾಸಿಲ್ದಾರ್ ಮೇಘಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net