ಹಾವು ಕಚ್ಚಿ ರೈತ ಸಾವು

27 MANJU 04
Published on

ಹೊಸಪೇಟೆ : ಹಸುಗಳಿಗೆ ಮೇವು ತರಲು ಹೋಲಕ್ಕೆ ಹೋಗಿದ್ದ ರೈತ ಹುಲುಗಪ್ಪ (35) ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೇವು ಕಟಾವು ಮಾಡುವ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ರೈತ ಹುಲಗಪ್ಪ ಮೂರ್ಚೆ ಬಂದು ಅಲ್ಲಿಯೇ ಬಿದ್ದಿದ್ದಾನೆ. ಹೊಲದಿಂದ ಬಂದಿಲ್ಲ ಎಂದು ಮನೆಯವರು ಹೊಲಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಆಗ ಹುಲುಗಪ್ಪ ಮೋರ್ಚೆ ಹೋಗಿ ಬಿದ್ದಿರೋದು ಗೊತ್ತಾಗಿದೆ. ಜತೆಗೆ ಬಾಯಲ್ಲಿ ಬೂರುಗ ಬರ್ತಿರೋದನ್ನ ಕಂಡ ಮನೆಯವರು ಕೂಡಲೇ ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ರೈತ ಹುಲುಗಪ್ಪ ಸಾವನ್ನಪ್ಪಿದ್ದಾರೆ. ಇಲ್ಲಿನ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net