ಕಾಸ್ಮೀರ ಭಾರತದ ಸಿಂಧೂರ

17 MANJU 05
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0098,0.0000; brp_del_sen:0.1300,0.0000; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 89.89087;aec_lux_index: 0;albedo: ;confidence: ;motionLevel: 0;weatherinfo: null;temperature: 41;
Published on

ಹೊಸಪೇಟೆ: ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ವೀರಯೋಧರಿಗೆ ಗೌರವ ಸಮರ್ಪಣೆ ಸಲ್ಲಿಸಲು ನಗರದ ವಕರಾಯ ದೇಗುಲದಿಂದ ಅಂಬೇಡ್ಕರ್ ವೃತ್ತದ ವರೆಗೆ ಸಾರ್ವಜನಿಕರಿಂದ ಶನಿವಾರ ತಿರಂಗಾ ಯಾತ್ರೆ ನಡೆಸಲಾಯಿತು.

ಎದುರಾಳಿ ಪಾಕಿಸ್ತಾನದ ವಿರುದ್ಧ ಅಪರೇಷನ್ ಸಿಂಧೂರದಲ್ಲಿ ನಮ್ಮ ದೇಶದ ವೀರಯೋಧರಿಗೆ ಗೌರವ ಸಮರ್ಪಣೆಗೆ ನಗರದ ಶ್ರೀವಡಕರಾಯ ದೇಗುಲದಿಂದ ಆರಂಭವಾದ ಯಾತ್ರೆ, ಪಾದಗಟ್ಟೆ ಶ್ರೀ ಆಂಜನೇಯಸ್ವಾಮಿ ದೇಗುಲ, ಗಾಂಧಿಚೌಕ್, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ಡಾ.ಶ್ರೀಪುನೀತ್ ರಾಜಕುಮಾರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘ ನಗರದ ಉದ್ಯಮಿಗಳು, ವ್ಯಾಪಾರಸ್ಥರು, ನಾಗರಿಕರು ಹಾಗೂ ನಾನಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ವಿಜಯನಗರ ಜಿಲ್ಲಾ ಬಿಜೆಪಿ ಸೇರಿದಂತೆ ನಾನಾ ಸಮುದಾಯಗಳ ಮುಖಂಡರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಪ್ರತಿಯೊಬ್ಬ ಭಾರತೀಯ ದೇಶಭಕ್ತಿ ತೋರಿಸುವ ಸಮಯ ಇದು.ದೇಶದ ವಿಚಾರದಲ್ಲಿ ಜಾತಿ ಧರ್ಮ ಇಲ್ಲ. ಎಲ್ಲರು ಒಂದೇ. ಶತೃ ರಾಷ್ಟ್ರಕ್ಕೆ ಭಾರತ ತಕ್ಕ ಬುದ್ದಿ ಕಲಿಸಿದೆ. ಪ್ರತಿಯೊಬ್ಬರು ಮೋದಿಯವರ ಕೈ ಬಲಪಡಿಸಬೇಕು. ಉಗ್ರಗಾಮಿಗಳನ್ನು ಹೊಡೆದು ಹಾಕಬೇಕು. ನಮ್ಮದು ಬಲಿಷ್ಠ ದೇಶ. ಪ್ರಪಂಚದಲ್ಲಿ ನಾವು ಬಲಿಷ್ಟ ರಾಷ್ಟ್ರವಾಗಿದೆ. ನಮ್ಮ ಮೂರು ಸೇನೆಗಳು ಬಲವಾಗಿವೆ. ಶತೃ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿವೆ ಎಂದರು.

ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿ, ಎಲ್ಲ ಸಮಾಜದ ಬಾಂಧವರನ್ನು ಆಹ್ವಾನಿಸಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಭಾರತೀಯ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿವೆ. ನಾವೆಲ್ಲ ಭಾರತೀಯರು ಒಂದು. ನಮ್ಮ ಸೈನಿಕರು ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಭಗವಂತ ಸೈನಿಕರಿಗೆ ಇನ್ನೂ ಶಕ್ತಿ ಕೊಡಲಿ. ನಾವು ಕೇಂದ್ರ ಸರಕಾರದ ಜತೆಗೆವಿರುತ್ತೇವೆ. ನಮ್ಮ ತಂಟೆಗೆ ಬಂದರೆ ಏನಾಗುತ್ತದೆ ಎಂದು ಈಗಾಗಲೇ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತೋರಿಸಿದ್ದಾರೆ ಎಂದರು.

ಪ್ರಮುಖರಾದ ಪ್ರಹ್ಲಾದ್ ಭೂಪಾಳ್, ಮಂಜುನಾಥ ಗುಪ್ತ, ಕಿಚಡಿ ಕೊಟ್ರೇಶ್, ರಾಘವೇಂದ್ರ, ಚಂದ್ರಕಾAತ್ ಕಾಮತ್, ಶಂಕರ್‌ಮೇಟಿ, ಅನುರಾಧ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net