ಒಂದು ಲಕ್ಷ ಕುರಿಗಾಹಿಗಳ ಹಾಜರು

Pandith Rao Chidri Siddaramaotsava
ಪಂಡಿತ್ ರಾವ್ ಚಿದ್ರಿ
Published on

ಹೊಸಪೇಟೆ: ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಕುರಿಗಾಹಿಗಳು ಭಾಗವಹಿಸುವರು ಎಂದು ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಪಂಡಿತ್ ರಾವ್ ಚಿದ್ರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

ನಾಡಿನಲ್ಲಿರುವ ಕುರಿಗಾಹಿಗಳ ಸ್ಥಿತಿ-ಗತಿ, ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಅಧಿಕಾರಿ ವರ್ಗ ಯಾವತ್ತೂ ಕಣ್ತೆರೆದು ನೋಡಲಿಲ್ಲ. ಎಲ್ಲೋ ಕಾಡಿನಲ್ಲಿ ಬದಕುವ ಸಂಸ್ಕೃತಿಯಿಂದ ಮುಖ್ಯ ವಾಹಿನಿಗೆ ಕುರಿಗಾಹಿಗಳು ಬಂದಿಲ್ಲ. ಕಷ್ಟ-ನಷ್ಟದಲ್ಲೇ ಜೀವನ ಕಳೆದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಕುರಿಗಾರರಿಗೆ ಅನೇಕ ಸೌಲಭ್ಯಗಳು ಸಿಕ್ಕಿವೆ. ಕುರಿಗಾರರ ಜೀವನ ಮಟ್ಟವನ್ನು ಎತ್ತರಿಸಲು ಹತ್ತು ಹಲವು ಯೋಜನೆ ತಂದು, ನಿಗಮವನ್ನೂ ಸ್ಥಾಪಿಸಿದ್ದಾರೆ ಎಂದರು.

ಕನಕದಾಸ ಉಣ್ಣೆ ನೇಕಾರ ಮತ್ತು ಕುರಿ ಸಾಕಣೆಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಹನುಮಂತಪ್ಪ, ಕೊಟ್ಟೂರು ಹೋಬಳಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಉಜ್ಜನಿ ರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net