

ಹೊಸಪೇಟೆ: ಇಲ್ಲಿನ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಬುಧವಾರ ವಿಶ್ವ ಶ್ರವಣ ದಿನ ಆಚರಿಸಲಾಯಿತು.
ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ್ ಮಾತನಾಡಿ, ಸಸಿಗೆ ನೀರು ಹಾಕುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೆಚ್ಚುತ್ತಿರುವ ಶಬ್ದಮಾಲಿನ್ಯದಿಂದ ಶ್ರವಣದೋಷ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ರೇಡಿಯೋ, ಟಿ.ವಿ, ಮೊಬೈಲ್ ಶಬ್ದ ಸೇರಿದಂತೆ ಹೆಡ್¸ಟ್‌ಗಳ ಅಧಿಕ ಬಳಕೆಯಿಂದಾಗಿ ಕಿವಿಯ ಒಳಭಾಗದ ನರಕೋಶಗಳು ದುರ್ಬಲಗೊಂಡು ಶ್ರವಣ ದೋಷಕ್ಕೆ ಎಡೆ ಮಾಡಿದಂತಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ ಮಾತನಾಡಿ, ನಾವು ಈಗಾಗಲೇ ಹುಟ್ಟುವ ಮಕ್ಕಳಿಗೆ ಶ್ರವಣ ಮಾಡುತ್ತೇವೆ. ದೋಷ ಕಂಡು ಬಂದ ಮಕ್ಕಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದರು.
ಆರ್‌ಸಿಎಚ್ ಡಾ.ಜಂಬಯ್ಯ ಮಾತನಾಡಿ, ಸಾರ್ವಜನಿಕರಿಗೆ ಶಬ್ದದ ಮಾಲಿನ್ಯದಿಂದ ಕಿವಿಗಳ ರಕ್ಷಣ ಮಾಡಿಕೊಳ್ಳಬೇಕು. ಹುಟ್ಟಿದ ತಕ್ಷಣ ಕಿವಿಯಲ್ಲಿ ಎಣ್ಣೆಂಗಳನ್ನು ಬಳಸಬಾರದು ಎಂದರು.
ವೈದರಾದ ಡಾ.ಭರತ, ಡಾ.ನಾಗಶೇಷ, ಡಾ.ರಾಜಶೇಖರ, ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಧರ್ಮನಗೌಡ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡಮನಿ ಇತರರಿದ್ದರು.