

ಹೊಸಪೇಟೆ: ಬೀದಿ ಬದಿಯಲ್ಲಿದ್ದ ಮೂರು ಅಂಗಡಿಗಳಿಗೆ ಯಾರೋ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಬಿದ್ದಿದ್ದು ಅಂದಾಜು 50 ಸಾವಿರ ರೂಪಾಯಿಯ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಗರದ ಬಳ್ಳಾರಿ ರಸ್ತೆಯ ಎಚ್.ಎಲ್.ಸಿ. ಕಾಲೂವೆ ಬಳಿ ಮಂಗಳವಾರ ತಡರಾತ್ರಿ ಘಟನೆ ನಡೆಸಿದೆ.
ನಗರದ ಗಾಳೆಪ್ಪ ಎಂಬುವ 50 ಸಾವಿರ ರೂ. ಬೆಲೆಬಾಳುವ ಟೀ ಅಂಗಡಿಯಲ್ಲಿದ್ದ ಅಂದಾಜು 10 ಸಾವಿರ ರೂ. ಬೆಲೆ ಬಾಳುವ ಗ್ಯಾಸ್ ಸಿಲಿಂಡರ್, ತಳ್ಳುವ ಬಂಡಿ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹಾನಿಯಾಗಿವೆ. ಕೆ.ರವಿಕುಮಾರ್ ಎಂಬುವರಿಗೆ ಸೇರಿದ ಅಂದಾಜು ಲಕ್ಷ ರೂ. ಬೆಲೆಬಾಳುವ ಅಂಗಡಿಯಲ್ಲಿ ಅಂದಾಝು 30 ಸಾವಿರ ರೂ. ಬೆಲೆಬಾಳುವ ಎರಡು ಟೇಬಲ್, 24 ಕುರ್ಚಿಗಳು, ಅಡುಗೆ ಮಾಡುವ ಸಾಮಗ್ರಿ ಹಾಗೂ ದಿನಸಿಗಳು ಸುಟ್ಟು ಕರಕಲಾಗಿವೆ. ಇನ್ನೂ ಭಾಷಾ ಎಂಬುವರ 50 ಸಾವಿರ ರೂ. ಬೆಲೆಬಾಳುವ ಅಂಗಡಿಯಲ್ಲಿ ತಳ್ಳುವ ಬಂಡಿ, ತಾಡಪಲ್, ಬಿದಿರು ಸೇರಿ ಇತರೆ 10 ಸಾವಿರ ರೂ. ವಸ್ತುಗಳು ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಮೂರು ಅಂಗಡಿಗಳು ಸುಟ್ಟು ಕರಕಲಾಗಿವೆ.
ಘಟನೆ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದ ಅವಘಡವನ್ನು ತಪ್ಪಿಸಿದ್ದಾರೆ. ಉಪಾವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಭೇಟಿ ನೀಡಿ ಪರಿಶೀಲಿಸಿದರು. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸುಟ್ಟು ಕರಕಲಾಗಿರುವ ಅಂಗಡಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.