ಶಿಶುಕ್ಷು ತರಬೇತಿಗೆ ಅರ್ಜಿ ಆಹ್ವಾನ

Published on

ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಗರ ವಿಭಾಗದ ವ್ಯಾಪ್ತಿಗೆ ಬರುವ ವಿಭಾಗಿಯ ಕಾರ್ಯಗಾರ ಇಲ್ಲಿನ ಘಟಕದಿಂದ ಒಂದು ವರ್ಷದ ಶಿಶುಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಶುಕ್ಷು ತರಬೇತಿ ಪಡೆಯಲು ಆಟೋ ಎಲೆಕ್ಟ್ರೀಷಿಯನ್, ಡೀಸೆಲ್ ಮೆಕ್ಯಾನಿಕ್, ಆಟೋ ವೆಲ್ಡರ್, ಆಟೋ ಬಾಡಿ ಬಿಲ್ಡರ್ ಹಾಗೂ ಶೀಟ್ ಮೆಟಲ್ ವರ್ಕ್ಸ್ ವೃತ್ತಿಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

www.apprenticeshipindia.gov.in ನಲ್ಲಿ ನೊಂದಣಿ ಮಾಡಿಕೊಂಡು ಪೋರ್ಟಲ್‌ನಿಂದ ಡಿವಿಸಿನಲ್ ಕಂಟ್ರೋಲರ್ ಕೆಕೆಆರ್‌ಟಿಸಿ ಹೊಸಪೇಟೆ ಡಿವಿಷನ್(ಇ0323900221) ವಿಳಾಸಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿಭಾಗದ ವಿಭಾಗಿಯ ಕಚೇರಿಗೆ ಆ.29ರಂದು ಬೆಳಿಗ್ಗೆ 11 ಗಂಟೆಗೆ ಸೂಕ್ತ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಕ.ಕ.ರ.ಸಾ.ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net