ಪತ್ರಕರ್ತೆ ಕೆ.ಶಾಂತಕುಮಾರಿ ಸುವರ್ಣ ಮಹೋತ್ಸವ ಪ್ರಶಸ್ತಿ

30 MANJU 09
Published on

ಹೊಸಪೇಟೆ: ಕರ್ನಾಟಕ ಸಂಭ್ರಮ 50ರ ನಿಮಿತ್ತ ನಗರದ ರಾಜ್ಯ ಸರ್ಕಾರ ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ನಿವಾಸಿ ಪತ್ರಕರ್ತೆ ಹಾಗೂ ಬರಹಗಾರ್ತಿ ಕೆ.ಶಾಂತಕುಮಾರಿ ಭಾಜನರಾಗಿದ್ದಾರೆ

ಬಾಲ್ಯದಲ್ಲೇ ಹೋರಾಟಕ್ಕೆ ಬಂದ ಇವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೋರಾಟದಲ್ಲಿ ಮುಂಚುಣಿಯಲ್ಲಿದ್ದರು. ಇಲ್ಲಿನ ಸ್ಥಳೀಯ ಪತ್ರಿಕೆ ಹೊಸಪೇಟೆ ಟೈಮ್ಸ್ ಪತ್ರಿಕೆಯಲ್ಲಿ ಬರಗಳನ್ನು ಬರೆಯುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಆರಂಭವಾದ ಕೆ.ಶಾಂತಕುಮಾರಿ ಅವರ ಪಯಣ ಸಂಯುಕ್ತ ಕರ್ನಾಟಕ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಮಟ್ಟದ ಪತ್ರಿಕೆಗಳಲ್ಲಿ ಉಪಸಂಪಾದಕಿಯಾಗಿ, ಅಂಕಣಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಸಿವು" ಕವನ ಸಂಕಲನ, ಪ್ರರ್ತಕರ್ತರ ಪದ ಕೋಶ, ಧ್ಯಾನ ಮತ್ತು ಮಾನಸಿಕ ಆರೋಗ್ಯ, ಸಮಾಜ ಬದಲಾಣೆಯಲ್ಲಿ ಮಹಿಳೆಯರ ಪಾತ್ರ, ಜನಪರ ಹೋರಾಟದಲ್ಲಿ ನನ್ನ ಬದುಕು ಸೇರಿದಂತೆ 15 ಕೃತಿಗಳು, ಕಥಾನಕಗಳಿವೆ.

ಇವರಿಗೆ ನಿಸ್ಸಿಮಾ ಕನ್ನಡತಿ ಸೇವಾ ಪ್ರಶಸ್ತಿ, ಸಾಹಿತ್ಯ ಸಂಮ್ಮಿಲನ ಪ್ರಶಸ್ತಿ, ರಾಜಲಕ್ಷಮ್ಮ ಸ್ಮಾರಕ ಪ್ರಶಸ್ತಿ, ಕರುನಾಡ ಕಣ್ಮಣಿ ಪ್ರಶಸ್ತಿ, ಡಾ.ಮಾಸ್ತಿ ಅಯ್ಯಂಗಾರ್ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಪ್ರಶಸ್ತಿ, ಕವಿರತ್ನ ಕಾಳಿದಾಸ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ಧೀರ ಮಹಿಳೆ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸಂದಿವೆ. ಈಗ ರಾಜ್ಯ ಸರ್ಕಾರ ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net