ವಿಎಸ್‌ಕೆಯುಬಿ ಶೈಕ್ಷಣಿಕ ಸಮಸ್ಯೆ ಪರಿಹರಿಸಲಿ

03 MANJU 05
Published on

ಹೊಸಪೇಟೆ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಮೊದಲಿನಿಂದಲೂ ಹಲವು ಸಮಸ್ಯೆಗಳ ಸುಳಿಯಲ್ಲಿದೆ. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಶಿವಾರೆಡ್ಡಿ ಆಗ್ರಹಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಕಳೆದ ವರ್ಷದಂತೆ ಈ ವರ್ಷವು ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಅದರಲ್ಲಿ ಕೆಲವು ವಿದ್ಯಾರ್ಥಿಗಳ ಫಲಿತಾಂಶ ದೋಷ ಪೂರಿತವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ನೀಡುವುದಾಗಿ ವಿವಿ ಕುಲಪತಿಗಳು ಭರವಸೆ ನೀಡಿದ್ದರು.

ವಿದ್ಯಾರ್ಥಿಗಳು ಮೊದಲು ಉತ್ತೀರ್ಣರಾಗಿ ತದನಂತರ ಅನುತ್ತೀರ್ಣ ಎಂದು ತೋರಿಸುವ ವಿಷಯಗಳಿಗೆ ಪರೀಕ್ಷಾ ಶುಲ್ಕವನ್ನು ಕಟ್ಟುವುದರ ಬಗ್ಗೆ ಕೂಡಲೇ ಸ್ಪಷ್ಟತೆ ನೀಡಬೇಕು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಮುಖಂಡರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ನಂತರ ತಹಸೀಲ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾದಿಕಾರಿ ಎಂ.ಎಸ್.ದಿವಾಕರಗೆ ಮನವಿ ಸಲ್ಲಿಸಿದರು. ವಿಎಸ್‌ಕೆಯುಬಿ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು. ಪ್ರಮುಖರಾದ ಪವನ್, ಲೋಕೇಶ್, ನಾರಾಯಣ ಮೂರ್ತಿ, ವೆಂಕಿ, ರಾಘು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net