ಆಡಳಿತದಲ್ಲಿ ಎಚ್.ಆರ್.ಗವಿಯಪ್ಪ ವಿಫಲ

Seeraj
Seeraj
Published on

ಹೊಸಪೇಟೆ: ಕಾಂಗ್ರೆಸ್ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಿದೆ. ಆದರೆ ಶಾಸಕ ಎಚ್.ಆರ್.ಗವಿಯಪ್ಪ ಅವರ ವೈಫಲ್ಯ ಮುಚ್ಚಿಕೊಳ್ಳೊಕೆ ಈ ರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಾಕ್ಷ ಸೀರಾಜ್ ಶೇಕ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ವಿಜಯನಗರ ಕ್ಷೇತ್ರಕ್ಕೆ 130 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಕರ ಎಚ್.ಆರ್.ಗವಿಯಪ್ಪ 100 ಕೋಟಿ ರೂ. ಕ್ರೀಯಾಯೋಜನೆಗೆ ಭೂಮಿ ಪೂಜೆ ಮಾಡಿಲ್ಲಾ. ಸಚಿವರ ವಿಶ್ವಾಸ ಗಳಿಸುವಲ್ಲಿ ನೀವು ವಿಫಲರಾಗಿದ್ದಾರೆ. ಸಚಿವರು, ಅಧಿಕಾರಿಗಳನ್ನು ನೀವು ಭೇಟಿಯಾಗದೇ, ಮನೆಯಲ್ಲಿ ಕುಳಿತ್ರೆ ಹೇಗೆ?  ಅವರು ಅಭಿವೃದ್ಧಿ ವಿಚಾರದಲ್ಲಿ ನಿಷ್ಕ್ರಿಯರಾಗಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳೊಕೆ ಈ ರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ಶಾಸಕನ ವಿರುದ್ಧ ಟಕ್ಕರ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net