

ಹೊಸಪೇಟೆ: ಕಲಬುರಗಿಯ ಸೇಡಂನಲ್ಲಿ ನಡೆಯಲಿರುವ ಕೊತ್ತಲ ಸ್ವರ್ಣ ಜಯಂತಿ, ಭಾರತೀಯ ಸಂಸ್ಕೃತಿ ಉತ್ಸವ-7ರ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಮಾಜಿ ಎಂಎಲ್‌ಸಿ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಉತ್ಸವವು ಜಗದ್ವಿಖ್ಯಾತ ಉತ್ಸವ ಆಗಲಿದೆ. ಸುಮಾರು 240 ಎಕರೆ ಪ್ರದೇಶದ ಪ್ರಕೃತಿ ನಗರ, ಬೀರನಹಳ್ಳಿ ಕ್ರಾಸ್ ಸೇಡಂ ರಸ್ತೆಯಲ್ಲಿ ಜ.29ರಿಂದ ಫೆ.06ರ ವರೆಗೆ ವಿವಿಧ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ 9 ದಿನಗಳ ಕಾಲ ಅತಿ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತಿದೆ. 9 ದಿನ ಅಂದಾಜು 30 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಉತ್ಸವದಲ್ಲಿ ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ ಸಮಾವೇಶ, ಕೃಷಿ ಸಮಾವೇಶ ಸೇರಿದಂತೆ ಸಮಾವೇಶಗಳು 240 ನಡೆಯುತ್ತಿದೆ. ಎಲ್ಲಾ ಸಮಾವೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ರಾಷ್ಟçಪತಿ ದ್ರೌಪದಿ ಮುರ್ಮು, ಮಾಜಿ ರಾಷ್ಟçಪತಿ ರಾಮನಾಥ ಕೋವಿಂದ, ಮಾಜಿ ಕ್ರಿಕೇಟಿಗ ಸಚಿನ್ ತಂಡೂಲ್ಕರ್, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.