ಮಕ್ಕಳಲ್ಲಿ ಆತ್ಮಸ್ಥೈರ್ಯ ಮುಖ್ಯ

16 MANJU 03
Published on

ಹೊಸಪೇಟೆ: ಅಗ್ನಿ ಅವಘಡಗಳು ಆಕಸ್ಮಿಕ ದುರಂತಗಳಾಗಿದ್ದು, ಧೈರ್ಯವೇ ಸರ್ವತ್ರ ಸಾಧನವಾಗಿದೆ. ತುರ್ತು ಸೇವೆ ನೀಡಿ ಜೀವ ಸಂರಕ್ಷಣೆಗೆ ಆದ್ಯತೆ ನೀಡುವುದು ಅಗ್ನಿಶಾಮಕ ದಳದ ಕರ್ತವ್ಯವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಾಲಿಪ್ರಮೋದ್ ಹೇಳಿದರು.

ನಗರದ ಖಾಸಗಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿAದ ಬೇಸಿಗೆ ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಬೆಂಕಿ ಅವಘಡಗಳಲ್ಲಿ ಧೈರ್ಯ, ತಾಳ್ಮೆಯಿಂದ ಸೇವೆ ನೀಡಲು ಮುಂದಾಗಬೇಕು. ಅಗ್ನಿ ದುರಂತಗಳು ನಡೆದಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅರಿತಿರಬೇಕು ಎಂದರು.

ಬಳಿಕ ಫೈಯರ್ ಇಂಜಿನ್ ಸಹಾಯದಿಂದ ದೊಡ್ಡ ಬೆಂಕಿಗಳನ್ನು ಆರಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಆಗ್ನಿ ನಿರೋಧಕ ಉಡುಪು ಮತ್ತು ಕೃತಕ ಉಸಿರಾಟ ಸಿಲಿಂಡರ್‌ನೊAದಿಗೆ ಅಗ್ನಿಯಲ್ಲಿ ಪ್ರವೇಶಿಸಿ ಪ್ರಾಣರಕ್ಷಣೆ ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡಾಗ ಮಾಡಬೇಕಾದ ಮುಂಜಾಗೃತ ಕ್ರಮಗಳನ್ನು ಅಗ್ನಿಶಾಮಕ ಉಪಕರಣಗಳನ್ನು ತಂದು ಅವುಗಳನ್ನು ಹೇಗೆ ಉಪಯೋಗಿಸಬೇಕು ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬುದನ್ನು ಸ್ವತಃ ಸ್ಕೌಟ್ಸ್ ಗೈಡ್ಸ್ಗಳಿಂದಲೇ ಪ್ರಾತ್ಯಕ್ಷಿಕೆ ಮಾಡಿಸಿ ಮಕ್ಕಳಲ್ಲಿ ಧೈರ್ಯ ತುಂಬಿಸಲಾಯಿತು.

ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಆನೆಗೊಂದಿ, ಪ್ರಾಧ್ಯಾಪಕ ಟಿ.ಎಂ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥಪ್ಪ, ಶಾಲೆಯ ಮುಖ್ಯಶಿಕ್ಷಕ ಎಸ್.ಅಶುತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net