ಸ್ಕೌಟ್ಸ್ ಗೆ ನೀಡುವ ಅನುದಾನ ರದ್ದಾಗಲಿ

22 MANJU 02
Published on

ಹೊಸಪೇಟೆ: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗೆ 5 ಸಾವಿರ ರೂ. ಅನುದಾನ ಗ್ರಾಮ ಪಂಚಾಯಿತಿ ನೀಡು ಸರ್ಕಾರದ ಆದೇಶವನ್ನು ವಿರೋಧಿಸುತ್ತೇವೆ ಎಂದು ರಾಜ್ಯ ಗ್ರಾ.ಪಂ. ಸದಸ್ಯರ ಕ್ಷೇಮಾಭಿವೃದ್ಧಿ ಸಂಘ ಸಂಘದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸ್ಕೌಟ್ಸ್ ಉತ್ತಮ ಸೇವೆ ನೀಡುತ್ತಿದೆ. ಅದಕ್ಕೆ ಅನುದಾನ ನೀಡುವುದಕ್ಕೂ ನಮ್ಮದೇನು ಅಭ್ಯಂತರ ಇಲ್ಲ. ಯಾವುದೇ ಅನುದಾನದ ಬಳಕೆಯಲ್ಲಿ ಮಾರ್ಗಸೂಚಿ ಬೇಕು. ಆದರೆ, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳನ್ನು ಹಣ ನೀಡುವ ಶಾಖಾ ಕಚೇರಿಗಳಂತೆ ಮಾಡಿಕೊಂಡು ಸಂಸ್ಥೆಗಳಿಗೆ ವಂತಿಗೆ ಹಣ ನೀಡಿ ಎಂದು ಆದೇಶ ಹೊರಡಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲ ಜಿಲ್ಲಾ 5,951 ಗ್ರಾಮ ಪಂಚಾಯಿತಿಗಳಿAದ ತಲಾ 5 ಸಾವಿರ ರೂ.ಗಳಂತೆ ಹಣ ಪಡೆದರೆ ಸ್ಕೌಟ್ಸ್ಗೆ 2.97 ಕೋಟಿ ರೂ. ಸಂಗ್ರಹವಾಗುತ್ತದೆ. ಹೀಗೆ ವಂತಿಕೆ ಹಣ ಸಂಗ್ರಹಿಸುವುದು ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಯಿಂದ ಏಕಾಏಕಿಯಾಗಿ ಅನುದಾನ ನೀಡುವ ಆದೇಶ ಮಾಡಿರುವುದು ಸರಿಯಾಗಿಲ್ಲ. ಗ್ರಾ.ಪಂ.ಗಳಲ್ಲಿ ಜಾರಿಗೆ ತರುವುದು ಕಷ್ಟವಾಗುತ್ತದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಸ್ಕೌಟ್ಸ್ ವಿಚಾರದಲ್ಲಿ ನೀಡಿರುವ ಆದೇಶವನ್ನು ರದ್ದುಪಡಿಸಬೇಕು. ಇನ್ನು ಮುಂದೆ ಇಂತಹ ಅವೈಜ್ಞಾನಿಕ ಆದೇಶ ಹೊರಡಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕೂಸಿನ ಮನೆ ವಿಚಾರದಲ್ಲಿ ಕೂಡ ಗ್ರಾ.ಪಂ. ಹೊರೆ ಇಳಿಸುವ ಕೆಲಸವಾಗುತ್ತಿಲ್ಲ. ಉದ್ಯೋಗ ಖಾತ್ರಿ ಕೆಲಸ ನಡೆಯದೆ ಇದ್ದರೂ ಕೂಸಿನ ಮನೆ ಮುಂದುವರಿಸುವ ಒತ್ತಡ ಇದೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ನರೇಗಾ ಕೆಲಸ ಮಾಡಿಸುವ ವ್ಯವಸ್ಥೆಯೂ ರಾಜ್ಯದಲ್ಲಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಸ್ವಲ್ಪ ತಳಮಟ್ಟಕ್ಕೆ ಇಳಿದು ವಿಚಾರಿಸುವ ಅಗತ್ಯ ಇದೆ ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಗೋವಿಂದ ನಾಯ್ಕ, ಪ್ರಮುಖರಾದ ಎಂ.ಲಕ್ಷ್ಮಣ, ಪಿ.ತಾಯಪ್ಪ, ದೊರೈರಾಜ್, ವೆಂಕಟೇಶ್ ನಾಯಕ, ವಿಜಯಕುಮಾರ್ ತಳವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net