ಶಾಲೆಯಲ್ಲಿ ಆರಂಭವಾದ ಚಿಣ್ಣರ ಕಲರವ

29 MANJU 04
Published on

ಹೊಸಪೇಟೆ: ಬೇಸಿಗೆ ರಜೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಜಿಲ್ಲೆಯಾದ್ಯಂತ ಗುರುವಾರದಿಂದು ಪುನರಾರಂಭವಾದವು.

ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಯಾದ್ಯಂತ ಮಂಗಳವಾರ ಮತ್ತು ಬುಧವಾರವೇ ಶಿಕ್ಷಕರು ಶಾಲಾ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧಗೊಳಿಸಿದ್ದರು. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ತರಗತಿ ಆರಂಭಿಸಲಾಗಿದ್ದು, ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತಳಿರು ತೋರಣ. ರಂಗು ರಂಗಿನ ರಂಗೋಲೆ ಹಾಕಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಇನ್ನೂ ಕೆಲ ಗ್ರಾಮಗಳಲ್ಲಿ ಎತ್ತಿನ ಬಂಡಿ ಸೇರಿದಂತೆ ಇತರೆ ಜಾಪದ ಕಲತಂಡಗಳಿAದ ಮೆರವಣಿಗೆ ನಡೆಸಲಾಯಿತು. ಕೆಲವು ಮಕ್ಕಳು ಅತ್ಯಂತ ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದರೆ, ಇನ್ನೂ ಕೆಲವು ಮಕ್ಕಳು ಬೇಸಿಗೆ ಮುಗಿಯುತ್ತಲ್ಲ ಎಂಬ ಬೇಸರದೊಂದಿಗೆ ಶಾಲೆಗಳತ್ತ ಮರಳಿದ ದೃಶ್ಯ ಕಂಡು ಬಂದಿತು.

ಪಾಠ ಪ್ರವಚನ ಕೇಳುವ ಉತ್ಸಾಹದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ಹಾಜರಾದರು. ಹೊಸ ತರಗತಿಗೆ ಕುಳಿತುಕೊಳ್ಳುವ ಸಂಭ್ರಮವೂ ಮಕ್ಕಳ ಮುಖದಲ್ಲಿತ್ತು. ಶಾಲಾ ಆರಂಭವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗಿತ್ತು. ಮಧ್ಯಾಹ್ನ ಬಿಸಿಯೂಟದೊಂದಿಗೆ ಮಕ್ಕಳಿಗೆ ವಿಶೇಷ ಸಿಹಿ ಉಣಬಡಿಸಿ ಖುಷಿಪಡಿಸಲಾಯಿತು. ರಜೆ ಬಳಿಕ ಶಾಲೆ ಆರಂಭವಾಗಿದ್ದರಿAದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬAತು. ಮೊದಲ ದಿನವಾದ ಕಾರಣ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ. ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net