ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸಿ

14 MANJU 04
Published on

ಹೊಸಪೇಟೆ: ಸರ್ಕಾರಿ ಶಾಲೆ ಮೂಲಭೂತ ಸೌಲಭ್ಯ ಒಸಗಿಸುವಂತೆ ಒತ್ತಾಯಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ತಾಲೂಕಿನ ವ್ಯಾಸನಕೆರಿ ಗ್ರಾಮಸ್ಥರು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.

ಎಐಎಸ್‌ಓನ ರಾಜ್ಯ ಸಮಿತಿ ಸದಸ್ಯ ಜೆ.ಪಿ.ರವಿಕಿರಣ್ ಮಾತನಾಡಿ, ಶಿಕ್ಷಣ ಪಡೆಯಲು ಮುಂದೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕಾಗಿರುವುದು ಸರ್ಕಾರದ ಸಂಪೂರ್ಣ ಜವಾಬ್ದಾರಿ. ಆದರೆ, ಈ ಜವಾಬ್ದಾರಿಯಿಂದ ಸರ್ಕಾರವು ದೂರ ಸರಿಯುತ್ತಿರುವುದು ಅತ್ಯಂತ ಆಘಾತದ ವಿಷಯವಾಗಿದೆ. ತಾಲೂಕಿನ ವ್ಯಾಸನಕೇರಿ ದಿನಗೂಲಿ-ರೈತ ಕಾರ್ಮಿಕರನ್ನು ಹಾಗೂ ವಲಸೆ ಕಾರ್ಮಿಕರನ್ನು ಹೊಂದಿರುವ ಗ್ರಾಮವಾಗಿದೆ. ಇಲ್ಲಿನ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಶಿಕ್ಷಣದ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಆಗ್ರಹಿಸಿದರು.

ಮುಖ್ಯ ಶಿಕ್ಷಕನ ಜತೆ ಮತ್ತೋರ್ವ ಶಿಕ್ಷಕರು ಅತಿಥಿ ಶಿಕ್ಷಇದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಯ ತನ್ನ ಗುಣಮಟ್ಟ ಕಳೆದು ಕೊಳ್ಳುತ್ತಿದ್ದು, ಪ್ರತಿವರ್ಷ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಬಂದಿದೆ. ಹಾಗೇನಾದರೂ ಈ ಶಾಲೆಯನ್ನು ಮುಚ್ಚಿದರೆ ಇಲ್ಲಿ ಓದುವಂತಹ ಬಡ ಮಕ್ಕಳು ಎಲ್ಲಿ ಹೋಗಿ ಓದಬೇಕು? ಒಂದನೇ ತರಗತಿ ಮಕ್ಕಳು ಓದಲೆಂದು ನಗರ ಪ್ರದೇಶಕ್ಕೆ ಬರಲು ಸಾದ್ಯವೇ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ವಿದ್ಯಾರ್ಥಿಗಳಿಗಾಗಿ ಇರುವುದು ಒಂದೇ ಕೊಠಡಿ! ಒಂದರಿAದ ಐದನೇ ತರಗತಿಯ ವರೆಗೆ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಕಚೇರಿ ಕೊಠಡಿಯಲ್ಲೇ ಮತ್ತೊಂದು ತರಗತಿಯನ್ನು ನಡೆಸುವಂತಾಗಿದೆ. ಶೌಚಗೃಹ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲದೆ ಬಳಲುತ್ತಿದೆ. ವಿದ್ಯಾರ್ಥಿಗಳಿಗೆ ಆಟವಾಡಲು ಸರಿಯಾದ ಮೈದಾನವಿಲ್ಲ. ಆದ್ದರಿಂದ ಸಮಸ್ಯೆಗಳನ್ನು ಪರಿಹರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಲ್ಲಪ್ಪ, ಪ್ರಮುಖರಾದ ಮಾರೇಶ್, ಮಾರುತಿ, ತಿಪ್ಪೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net