

ಹೊಸಪೇಟೆ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೋಬ್ಬರು ಸಹಕಾರ ನೀಡಬೇಕು ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ತಾಲೂಕಿನ ಕಡ್ಡಿರಾಂಪುರದಲ್ಲಿ ಶುಕ್ರವಾರ ನಡದ ಸರ್ಕಾರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳಗುವ ಸಿರಿ ಮೊಳಕೆಯಲ್ಲಿ ಎನ್ನುವ ನಾಣ್ಣುಡಿಯಂತೆ ಮಕ್ಕಳ ಪ್ರತಿಭೆ ಕೇವಲ ಶಿಕ್ಷಣಕ್ಕಾಗಿ ಸೀಮಿತವಾಗಿರದೆ ಅವರವರ ಕಲೆ, ಸಂಸ್ಕೃತಿ, ಸಾಹಸ ಅಥವಾ ಅವರವರ ವಿಶೇಷ ಪ್ರತಿಭೆಯನ್ನು ಹೊರಹಾಕಲು ಶಾಲೆಗಳು ಸಹಕಾರಿ ಆಗುತ್ತವೆ. ಶಾಲಾ ವಾರ್ಷಿಕೋತ್ಸವ ಸೇರಿದಂತೆ ಇತರೆ ವಿಶೇಷ ಕಾರ್ಯಕ್ರಮಗಳು ಆಗಾಗ ಶಾಲೆಯಲ್ಲಿ ನಡೆಯಬೇಕು ಎಂದರು.
ಹಂಪಿ ಗ್ರಾ.ಪಂ. ಅಧ್ಯಕ್ಷೆ ರಜನಿ, ಪಿಡಿಒ ಗಂಗಾಧರ, ಬಿಇಒ ಕಚೇರಿಯ ಸ್ಥಾನಿಕಾಧಿಕಾರಿ ಶಿವರಾಮ್, ಪ್ರಮುಖರಾದ ಗೋಪಾಲ, ಹುಲಿಯಪ್ಪ, ನಲ್ಲಾಸ್ವಾಮಿ, ಶಿವು, ಪ್ರಶಾಂತ್, ಅಜ್ಜಪ್ಪ ಸ್ವಾಮಿ, ರಘು ನಾಯ್ಕ ಇತರರಿದ್ದರು.