ವಲಸೆ ಹೋದ ಕುಟುಂಬಗಳ ಮಾಹಿತಿ ನೀಡಿ

29 MANJU 08
Published on

ಹೊಸಪೇಟೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ವಲಸೆ ಹೋಗಿರುವ ಪರಿಶಿಷ್ಟ ಕುಟುಂಬಗಳ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕುರಿತಂತೆ ಸಮುದಾಯದ ಮುಖಂಡರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವೆಡೆ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಮತ್ತು ಇನ್ನಿತರ ಕಾರಣಗಳಿಂದ ಹೋಗಿರುವ ಕುಟುಂಬಗಳನ್ನು ಹೊರತು ಪಡಿಸಿ ಶೇ.86 ರಷ್ಟು ಸರ್ವೇ ಕಾರ್ಯ ಮುಗಿದ್ದಿದ್ದು. ಇನ್ನೂ ಶೇ.14 ರಷ್ಟು ಮಾತ್ರ ಸಮೀಕ್ಷೆ ಬಾಕಿ ಇದೆ. ಜಿಲ್ಲೆಯಲ್ಲಿ 2011 ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಜನಾಂಗದವರು 3,24,306 ಸಂಖ್ಯೆಯಲ್ಲಿ ಇದ್ದು. ಇದರ ಅನ್ವಯ ಜಿಲ್ಲೆಯಲ್ಲಿ 2025 ಕ್ಕೆ ಸುಮಾರು 3,95,866 ಅಂದಾಜಿಸಲಾಗಿದೆ. ಈ ವರೆಗೆ 3,39,549 ಪರಿಶಿಷ್ಟ ಜಾತಿ ಜನಾಂಗದವರನ್ನು ಸರ್ವೇ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಜಿಲ್ಲೆಯಲ್ಲಿರುವ ವಲಸಿಗರು ಆದಷ್ಟು ಬೇಗ ಸಮೀಕ್ಷೆಯಲ್ಲಿ ಸ್ವಯಂ ಧೃಡೀಕರಿಸಿಕೊಳ್ಳಬೇಕು. ಸಮುದಾಯದ ಮುಖಂಡರು ಸಹಕರಿಸಬೇಕು. ಒಂದು ವೇಳೆ ವಲಸಿಗರು ಬರಲು ಸಾಧ್ಯವಾಗದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net