

ಹೊಸಪೇಟೆ : ಸಂಡೂರು ತಾಲೂಕಿನ ಸ್ವಾಮಿಮಲೈ, ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ವಿಜಯನಗರ ನಾಗರಿಕ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಮರಿಯಮ್ಮನಹಳ್ಳಿಯ ಶ್ರೀ ಗುರುಪಾದೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಹಗರಿಬೊಮ್ಮನಹಳ್ಳಿಯ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಂಡೂರು ತಾಲೂಕಿನ ಸ್ವಾಮಿಮಲೈ, ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಸ್ವಾಮಿಮಲೈ ಅರಣ್ಯ ಪ್ರದೇಶದ ದೇವದಾರಿಯಲ್ಲಿ 485.77 ಹೆಕ್ಟೇರ್ ಹಾಗೂ ರಾಮನಮಲೈ ಅರಣ್ಯ ಪ್ರದೇಶದ 60-70 ಹೆಕ್ಟೇರ್ ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಪುನರರಾಂಭಕ್ಕೆ ಅಗತ್ಯವಾಗಿರುವ ಅದಿರು ಪೂರೈಸಲು ಸಂಡೂರು ತಾಲೂಕಿನ ಸ್ವಾಮಿಮಲೈ, ರಾಮನಮಲೈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ ಎಂದರು.
ಸAಡೂರಿನ ಕಿರು ಅರಣ್ಯ ಪ್ರದೇಶ ಅತ್ಯಂತ ವಿಶಿಷ್ಟವಾಗಿದೆ. ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕು ಎಂದು ಕರೆಯಲ್ಪಡುವ ಈ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಪ್ರಕೃತಿಯ ಸಮತೋಲನ ಏರುಪೇರಾಗುತ್ತದೆ. ಗಣಿಗಾರಿಕೆ ಆರಂಭವಾದರೆ 99,330 ಮರಗಳು ನಾಶವಾಗಿ ಅಪರೂಪದ ವನ್ಯ ಜೀವಿಗಳ ಸಂತತಿಯೂ ಅಳಿಯಲಿದೆ. ಸ್ವಾಮಿಮಲೈ (ಕುಮಾರ ಸ್ವಾಮಿ ಗುಡ್ಡ) ಪಾಕೃತಿಕವಾಗಿ ಸಂಪತ್ಬರಿತವಾಗಿದ್ದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಗಿರಿಧಾಮವಾಗಿದೆ. ಇಂಥದೊAದು ಅಪರೂಪದ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯದವೆಂದು ಘೋಷಿಸಿ ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ವೈ.ಯಮುನೇಶ್, ಪ್ರಮುಖರಾದ ಯು.ಆಂಜನೇಯಲು, ಎ.ಪಂಪಣ್ಣ, ಎ.ರಾಮಚಂದ್ರ, ಗೌಡಣ್ಣನವರ್, ಡಾ.ಲಕ್ಷ್ಮಣ, ಡಿ.ವಿಶ್ವನಾಥ, ನಜೀರ್ ಸಾಬ್, ಸಣ್ಣಕಾಸಿ, ಎಚ್.ತಿಪ್ಪೇಸ್ವಾಮಿ, ಜಿ.ರಾಜೇಂದ್ರ, ಡಾ.ಶಶಿಕಾಂತ್ ಜೋಳೇಕರ್, ಕೆ.ವಿ.ರಾಮುಲು ಪ್ರಭಾಕರ್, ಎಂ.ಹೊನ್ನೂರಪ್ಪ, ಜಿ.ರಮೇಶ, ಪಂಪಾಪತಿ, ಪಂಪನಗೌಡ, ಜಿ.ಜಂಬಣ್ಣ, ಪ್ರಭಾಕರ್, ಜಾಲಗಾರ ವೆಂಕಟೇಶ್ ಇತರರಿದ್ದರು.