

ಹೊಸಪೇಟೆ: ನಗರದ ಕಾರಿಗನೂರಿನಲ್ಲಿ ಸಾರ್ವಜನಿಕ ರುದ್ರಭೂಮಿ ಅಭಿವೃದ್ದಿ ಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಸೇರಿ ಇತರೆ ಸಂಘಟನೆಗಳಿAದ ಹೊಸಪೇಟೆಯಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾರಿಗನುರಿನಲ್ಲಿ ಅಂದಾಜು 6 ರಿಂದ 8 ಸಾವಿರ ಜನಸಂಖ್ಯೆ ಹೊಂದಿದೆ. ಸರ್ವೆ ನಂ 180/2 ಭೂಮಿಯಲ್ಲಿನ ವಶಪಡಿಸಿಕೊಂಡು ಹದ್ದುಬಸ್ತು ಮಾಡಿ ಸುತ್ತಲು ಕಾಂಪೌAಡ್ ಗೋಡೆ ನಿರ್ಮಿಸಬೇಕು. ಬೋರ್‌ವೆಲ್ ಕೊರೆಸಬೇಕಿದೆ. ಸ್ಮಾಶನವನ್ನು ಮೂಲಸೌಕರ್ಯದೊಂದಿಗೆ ಅಭಿವೃದ್ಧಿ ಪಡಿಸಬೇಕಿದೆ. ಹಾಗೂ ಅಲ್ಲಿಯೇ ಮರಣ ಪ್ರಮಾಣ ಪತ್ರ ನೊಂದಣಿಯಾಗಬೇಕು ಎಂದು ಒತ್ತಾಯಿಸಿಲಾಯಿತು.
ಪ್ರಮುಖರಾದ ಗಂಟೆ ಸೋಮಶೇಖರ, ಪಿ.ವೆಂಕಟೇಶ್, ಮದುರಚಂದ್ರಶಾಸ್ತಿç, ಪರಮೇಶ್ವರ ಗೌಡ, ಗುಜ್ಜಲ್ ಗಣೇಶ್, ಎಸ್.ಯರಿಸ್ವಾಮಿ, ಬಾಲುಸಾಬ್, ಹುಲುಗಪ್ಪ, ವದ್ದಟ್ಟಿ ಸುಂಕಪ್ಪ, ಬೋಡ ರಾಮಪ್ಪ, ಹೊನ್ನೂರಸ್ವಾಮಿ, ದೊಡ್ಡ ಬಜಾರೆಪ್ಪ, ವಿ.ರಂಗಯ್ಯ ಇತರರಿದ್ದರು.