ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

Published on

ಹೊಸಪೇಟೆ: ನಗರದ ಹೊರವಲಯದ ರಾಷ್ಟಿçÃಯ ಹೆದ್ದಾರಿ 50ರಲ್ಲಿನ ಶನೇಶ್ವರ ದೇವಸ್ಥಾನದ ಬಳಿ ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಶೀಲವಂತ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಎಸ್‌ಪಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಎಸ್.ಲಮಾಣಿ ನೇತೃತ್ವದಲ್ಲಿ ಶೋಧನೆ ನಡೆಸಲಾಗಿದ್ದು, ಈ ವೇಳೆ ಆರ್‌ಟಿಓ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ಶೇಖ್.ಜಿ, ಚಾಲಕ ದೇವರಾಜ್, ಗೃಹರಕ್ಷಕ ಸಿಬ್ಬಂದಿ ಗಿರೀಶ್ ಸೇರಿದಂತೆ ಜೀಪಿನಲ್ಲಿದ್ದ ಇಬ್ಬರನ್ನು ಶೋಧನೆ ನಡೆಸಲಾಗಿದೆ. ಈ ವೇಳೆ 51,610 ರೂ. ದೊರೆತ್ತಿದೆ. ಈ ಬಗ್ಗೆ ದಾಖಲಾತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಶೋಧನಾ ಕಾರ್ಯದಲ್ಲಿ ಸಿಬ್ಬಂದಿಗಳಾದ ಸುಭಾಷ್, ಶ್ರೀನಿವಾಸ್, ಸುರೇಶ್, ರೇಣುಕಪ್ಪ, ಚನ್ನಬಸಪ್ಪ, ಕುಮಾರ್ ನಾಯ್ಕ ಇದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net