ಜಾತ್ಯಾತೀತತೆ ದೇಶದ ಉಸಿರು

01 MANJU 05
Published on

ಹೊಸಪೇಟೆ: ಸಂವಿಧಾನದ ಪೀಠಿಕೆಯಲ್ಲಿರುವ ಪದಗಳಾದ ಜಾತ್ಯಾತೀತೆ ಮತ್ತು ಸಮಾಜವಾದಿ ಪದಗಳನ್ನು ತೆಗೆಯಬೇಕೆನ್ನುವ ಆರ್‌ಎಸ್‌ಎಸ್ ಹೇಳಿಕೆ ದೇಶದಲ್ಲಿ ಜನಾಂಗೀಯ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಕೂಡಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಂಚಾಲಕ ಎ.ಕರುಣಾನಿಧಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘ ಪರಿವಾರವು ತನ್ನ ಬಚ್ಚಿಟ್ಟ ಅಜೆಂಡಾವನ್ನು ಜಾರಿಗೊಳಿಸಲು ಅಂಬೇಡ್ಕರ್ ಹೆಸರನ್ನು ಮುಂದೆ ತಂದಿರುವುದು ದಲಿತರನ್ನು ತನ್ನ ಉದ್ದೇಶಕ್ಕೆ ಬಳಸುವ ಹುನ್ನಾರವನ್ನೂ ಬಯಲುಗೊಳಿಸಿದೆ. ಇದು ಅಂಬೇಡ್ಕರ್ ರವರಿಗೂ ಮಾಡಿದ ಅಪಚಾರವಾಗಿದೆ. ಸ್ವಾತಂತ್ರ ಹೋರಾಟದಲ್ಲಿ ಜನತೆ ತಮ್ಮ ಧರ್ಮ, ಜಾತಿ, ಭಾಷೆ, ಎಲ್ಲವನ್ನೂ ಮೀರಿ ಭಾಗವಹಿಸಿದ್ದಾರೆ. ಹಾಗಾಗಿ ಜಾತ್ಯಾತೀತತೆಯಂಬುದು ಎಂಬುದು 42 ನೇಯ ತಿದ್ದುಪಡಿಯಲ್ಲಿ ಸೇರಿದ ಕೇವಲ ಪದವಲ್ಲ ಬದಲಿಗೆ ಈ ದೇಶದ ಜನರ ಉಸಿರಾಗಿದೆ. ಆದ್ದರಿಂದಲೇ ಜಾತ್ಯಾತೀತತೆಯೆಂದರೆ ಧರ್ಮರಹಿತ ಪ್ರಭುತ್ವ. ಆದರೆ, ಕಾಂಗ್ರೇಸ್ ಈಪದಗಳನ್ನು 42ನೇಯ ತಿದ್ದುಪಡಿಯಲ್ಲಿ ಸೇರಿಸಿದೆ ಎಂಬ ಏಕ ಮಾತ್ರ ಕಾರಣಕ್ಕಾಗಿ ಇವುಗಳನ್ನು ತೆಗೆಯಬೇಕು ಎನ್ನುವುದು ಸಂಘ ಪರಿವಾರದ ಮೂರ್ಖತನ ಎಂದು ಆಗ್ರಹಿಸಿದರು.

ಮುಖಂಡ ಬಿ.ಮಹೇಶ್ ಮಾತನಾಡಿ, ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ 368 ನೇ ಕಲಂ ಅಡಿ ಇದೆಯಾದರೂ ಸಂವಿಧಾನವನ್ನು ತೆಗೆದುಹಾಕುವ ಇಲ್ಲವೇ ರದ್ದುಗೊಳಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎನ್ನುವುದಕ್ಕೆ ನ್ಯಾಯಾಂಗದ ತೀರ್ಪುಗಳಿವೆ. ಸಮಾನತೆ ಸಂವಿಧಾನದ ಮೂಲರಚನೆಯಾಗಿದೆ. ಆದ್ದರಿಂದ ಜಾತ್ಯಾತೀತತೆ ತೆಗೆಯವುದೆಂದರೆ ರಾಜಕೀಯ ಸಮಾನತೆಯ ನಿರಾಕರಣೆಯಾಗಿದೆ. ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ರಕ್ಷಿಸಬೇಕಾಗಿದೆ ಎಂದರು.

ಪ್ರಮುಖರಾದ ಕಲ್ಯಾಣಯ್ಯ, ಕೆ.ಬಸವರಾಜ, ವೆಂಕಟೇಶುಲು, ಎ.ಮರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net