

ಹೊಸಪೇಟೆ: ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ರಕ್ತ ನಿಧಿಗಳು ಇಲ್ಲದಿರುವುದರಿಂದ, ರೋಟರಿ ಕ್ಲಬ್‌ನಿಂದ ಅಪರೂಪದ ರಕ್ತ ಗುಂಪುಗಳು ಮತ್ತು ಪ್ಲೇಟ್‌ಲೆಟ್‌ಗಳನ್ನು ಸಂಗ್ರಹಿಸುವ ರಕ್ತ ಕೇಂದ್ರ ಜೂ.28ಕ್ಕೆ ಲೋಕಾರ್ಪಣೆ ಆಗಲಿದೆ ಎಂದು ರೋಟರಿ ಅಧ್ಯಕ್ಷ ದೀಪಕ್ ಕೊಳಗದ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ತದ ಅವಶ್ಯಕತೆ ಹಾಗೂ ಪಡೆಯುವಲ್ಲಿ ರೋಗಿಗಳ ಅನುಭವಿಸುತ್ತಿರುವ ತೊಂದರೆಯನ್ನು ಸಮೀಕ್ಷೆಯನ್ನು ಮಾಡಿದ್ದೇವೆ. ಒಂದೇ ಪ್ಲೇಟ್‌ಲೆಟ್ ಡೋನರ್ ಯಂತ್ರದೊAದಿಗೆ ಸಂಪೂರ್ಣ ಸುಸಜ್ಜಿತ ರಕ್ತ ನಿಧಿಯನ್ನು ಹೊಂದಲು ಯೋಚಿಸಿದ್ದು ರೋಟರಿ ಇಂಟರ್ನ್ಯಾಷನಲ್ ಹಾಗೂ ವೈ ಉಮಾಮಹೇಶ್ವರರಾವ್ ಸ್ಮರಣಾರ್ಥ ರಕ್ತ ನಿಧಿ ಕೇಂದ್ರ ಆರಂಭವಾಗಲಿದೆ ಎಂದರು.
ರಕ್ತ ಕೇಂದ್ರವನ್ನು ನಡೆಸಲು ನಮ್ಮಲ್ಲಿ ಪೂರ್ಣ ಪ್ರಮಾಣದ ತಂತ್ರಜ್ಞರು, ಸಿಬ್ಬಂದಿ ಲಭ್ಯತೆ ಇದ್ದು. ಈ ರಕ್ತ ಸಂಪರ್ಕವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ರಕ್ತವನ್ನು ಸಂಗ್ರಹಿಸಿ ಹೆಪ್ಪುಗಟ್ಟಿದ ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳು, ಕ್ರಯೋಪ್ರೆಸಿಪಿಟೇಟ್‌ನೊಂದಿಗೆ ಪ್ಯಾಕ್ ಮಾಡಿದ ಕೆಂಪು ಮಾರಾಟಗಳನ್ನು ತಯಾರಿಸುತ್ತೇವೆ. ಸಿಂಗಲ್ ಡೋನರ್ ಪ್ಲಾಟ್‌ಲೆಟ್ ಕೂಡ ಇದೆ ಎಂದರು. ಮಾರುಕಟ್ಟೆಗೆ ಹೋಲಿಸಿದರೆ ನಾವು ಬಹಳ ಕಡಿಮೆ ದರದಲ್ಲಿ ಶುಲ್ಕ ವಿಧಿಸುತ್ತಿದ್ದೇವೆ ಎಂದರು.
ಸAಸ್ಥೆಯ ಅಬ್ದುಲ್ ಹಕ್ಕಶೇಠ, ಕಾರ್ಯದರ್ಶಿ ವೀರಭದ್ರ, ವಿಜಯಸಿಂದಗಿ, ಕುಮಾರಸ್ವಾಮಿ ಇತರರಿದ್ದರು.