

ಹೊಸಪೇಟೆ: ನಗರದಲ್ಲಿ ಕರ್ಕಶ ಶಬ್ದ ಹರಡಿಸುವ ಬೈಕ್‌ಗಳ ಸಂಚಾರ, ತ್ರಿಬಲ್ ರೈಡಿಂಗ್, ಮೈನಿಂಗ್ ಲಾರಿಗಳು ರ್ಯಾಶ್ ಡ್ರೆöÊವಿಂಗ್ ಹಾವಳಿ ಹೆಚ್ಚಾಗಿದ್ದು, ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಸೂಚನೆ ನೀಡಿದರು.
ನಗರದ ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಹರಪನಹಳ್ಳಿ ಮತ್ತು ಕೂಡ್ಲಿಗಿ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಟೋ ಸ್ಟಾಂಡ್ ನಿರ್ಮಾಣ ಮಾಡಲು ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಸ್ಥಳ ಗುರುತಿಸಿ ವರದಿ ನೀಡಬೇಕು. ನಗರದಲ್ಲಿ ಪುನೀತ್ ರಾಜಕುಮಾರ್ ವೃತ್ತದ ಬಳಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ಸ್ಥಳ ಗುರುತಿಸಬೇಕು. ರಾಷ್ಟಿçÃಯ ಹೆದ್ದಾರಿಗಳಲ್ಲಿ ತಿರುವು ರಸ್ತೆಗಳ, ವಿಭಜಕ ರಸ್ತೆಗಳ ಮಾರ್ಗಸೂಚಕ ನಾಮಫಲಕಗಳನ್ನು ಕಡ್ಡಾಯವಾಗಿ 200 ಮೀಟರ್ ಮುಂದೆಯೇ ಅಳವಡಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ನಾನೇ ಗಮನಿಸಿದ್ದೇನೆ. ಹೆದ್ದಾರಿಯಲ್ಲಿ ಈಗಿರುವ ನಾಮಫಲಕಗಳು ಸಂಚರಿಸುವವರಿಗೆ ತೀವ್ರ ಗೊಂದಲ ಮೂಡಿಸುತ್ತವೆ. ತಿರುವುಗಳ ಮುಂದೆ ಫಲಕಗಳನ್ನು ಅಳವಡಿಸಿರುವುದರಿಂದ ಚಾಲಕರಿಗೆ ತೊಂದರೆಯಾಗುತ್ತದೆ ಇದರಿಂದ ಅಫಘಾತಕ್ಕೂ ಕಾರಣವಾಗಲಿದೆ. ಶೀಘ್ರ ಕ್ರಮ ವಹಿಸಬೇಕು. ಎನ್‌ಎಚ್.50 ರಲ್ಲಿ ಬರುವ ಟನಲ್‌ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದರು.
ನಗರದ ಭಟ್ಟರಹಳ್ಳಿ ಆಂಜನೇಯ ದೇಗುಲದ ಬಳಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆನಂತಶಯನಗುಡಿ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ ರಸ್ತೆ ಸುಧಾರಣೆ ಕೈಗೊಳ್ಳಲು ಕ್ರಮ ವಹಿಸಬೇಕು. ನಗರದ ನ್ಯಾಯಾಲಯ, ಕಾಲೇಜು ಹಾಗೂ ಹರಿಹರ ರಸ್ತೆಯಲ್ಲಿ ರಸ್ತೆತಡೆಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.
ಎಎಸ್ಪಿ ಮಂಜುನಾಥ, ಪಿಡಬ್ಲೂಡಿ ಇಇ ದೇವದಾಸ್, ರಾಷ್ಟೀಯ ಹೆದ್ದಾರಿ ಅಧಿಕಾರಿ ಶೀರಿಷ್, ಸಾರಿಗೆ ಅಧಿಕಾರಿ ಧನರಾಜ್ ಇತರರಿದ್ದರು.