

ಹೊಸಪೇಟೆ: ನಗರದ ಹೃದಯಭಾಗದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಮಸೀದಿಯ ಮಳಿಗೆಗಳನ್ನು ಎಸಿ ಶೇಕ್ ತನ್ವೀರ್ ಆಸೀಫ್ ನೇತೃತ್ವದಲ್ಲಿ ಸೋಮವಾರ ನಾಲ್ಕು ಜಿಸಿಬಿಗಳಿಂದ ತೆರವು ಕಾರ್ಯ ಆರಂಭಿಸಲಾಯಿತು. ಟಿಎಚ್‌ಒ ಕಚೇರಿ ಎದುರಿನ ಬೃಹತ್ ಮಸೀದಿ ಕಟ್ಟಡ 15ಕ್ಕೂ ಅಧಿಕ ಮಳಿಗೆಗಳನ್ನು ರಸ್ತೆ ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಈ ಹಿಂದೆ ನಗರಸಭೆ ರಸ್ತೆ ವಿಸ್ತರಣೆ ವೇಳೆ ತೆರವಿಗೆ ನೋಟಿಸ್ ನೀಡಲಾಗಿತ್ತು. ಮುಖಂಡರು ಸ್ವತಃ ತೆರವುಗೊಳಿಸುವುದಾಗಿ ಹೇಳಿ, ನಗರಸಬೆ ಜೆಸಿಬಿಯನ್ನು ಹಿಂದಕ್ಕೆ ಕಳಿಸಿದ್ದರು. ನಂತರ ತೆರವಿಗೆ ತಡೆ ತಂದಿದ್ದರು. ಇದೀಗ ಎಸಿ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತರು, ಡಿವೈಎಸ್ಪಿ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಮಳಿಗೆಗಳ ತೆರವು ಕಾರ್ಯ ನಡೆದಿದೆ.