ಶಾಸಕ ಗ್ರಾಮೀಣ ಭಾಗದ ರಸ್ತೆ ಪರಿಶೀಲನೆ

news
ಹೊಸಪೇಟೆ ತಾಲೂಕಿನ ರಾಂಪುರ ಗ್ರಾಮಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಭೇಟಿ ರಸ್ತೆ ಸ್ಥಿತಿಗತಿ ಪರಿಶೀಲಿಸಿದರು.
Published on

ಹೊಸಪೇಟೆ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗಾಗಿ ತಾಲೂಕಿನ ರಾಂಪುರ್ ಮಗಾಣಿ, ನರಸಾಪುರ ಮಾಗಾಣಿ, ಜಾಗೀರದಾರ ಬಂಡಿ ಗ್ರಾಮಗಳಿಗೆ ಶಾಸಕ ಎಚ್.ಆರ್.ಗವಿಯಪ್ಪ ಭೇಟಿ ಪರಿಶೀಲಿಸಿದರು. ರೈತರ ಅನುಕೂಲಕ್ಕಾಗಿ

ಮುಖ್ಯರಸ್ತೆಯಿಂದ ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ಮಾಗಾಣಿ ರಸ್ತೆಗಳ ಅಭಿವೃದ್ಧಿಗೆ 15 ರಸ್ತೆಗಳ ಸ್ಥಳ ವೀಕ್ಷಣೆ ಮಾಡಿದರು. ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆಯಿಂದ ರಸ್ತೆಗಳ ಕಾಮಗಾರಿ ನಡೆಸಲು ಸೂಚಿಸಿದರು. ಅಲ್ಲದೆ, ಅತಿ ಅವಶ್ಯವಿರುವ ಕಡೆ ಸಿಸಿ ರಸ್ತೆ, ಚರಂಡಿ ಮತ್ತು ಶಾಲೆಗಳ ರಿಪೇರಿ ಕಾಮಗಾರಿಗಳಿಗೆ ನಡೆಸಬೇಕು. ಲಭ್ಯವಿರುವ ಅನುದಾನ ಬಳಕೆಗೆ ಅಧಿಕಾರಿಗಳಿಗೆ ಸೂಚಿಸಿದರು.

ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಸುರೇಶ್, ಪ್ರಮುಖರಾದ ರಘುಕುಮಾರ್, ಅಂಜನಪ್ಪ, ಬಸವರಾಜ್ ನಾಗೇನಹಳ್ಳಿ, ತೋಟಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net