

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಆಧುನಿಕತೆ ತಂತ್ರಜ್ಞಾನ ಬೆಳೆದಂತೆ ಸಾಂಪ್ರದಾಯಿಕ ಕೃಷಿ ಕಣಗಳೂ ಮಾಯವಾಗಿದ್ದು, ರೈತರು ರಸ್ತೆಗಳನ್ನೇ ಕಣವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರ ಜತೆ ಕೃಷಿಕನ ಜೀವಕ್ಕೆ ಕುತ್ತು ಬರುವ ಆತಂಕ ಹೆಚ್ಚಾಗುತ್ತಿದೆ.
ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಬಹುತೇಕರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಸಾಂಪ್ರದಾಯಿಕ ಕಣಗಳನ್ನು ಮಾಡದೇ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಅರ್ಧ ಭಾಗ ಕೃಷಿ ಉತ್ಪನ್ನಗಳ ರಾಶಿ ಕಂಡುಬರುತ್ತಿದೆ. ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಒಕ್ಕಲು ಮಾಡಲು ಈಗ ರಸ್ತೆಗಳನ್ನೇ ಅವಲಂಬಿಸುತ್ತಿದ್ದಾರೆ. ರಸ್ತೆಯ ಮಧ್ಯೆ ಹುಲ್ಲು ಹಾಕಿ ಕಣಸುಗ್ಗಿ ಮಾಡುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಹಲವು ಬೆಳೆ ಬೆಳೆದಿರುವ ರೈತರು, ಅವುಗಳ ಕಟಾವು ಮಾಡಿ ರಸ್ತೆಯಲ್ಲಿ ರಾಶಿ ಹಾಕಿದ್ದಾರೆ. ಇಂಥ ಸ್ಥಳಗಳಲ್ಲಿ ರೈತರು, ಹಗಲು–ರಾತ್ರಿ ಬೆಳೆಗಳಿಗೆ ಕಾವಲು ಕಾಯುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ಜೀವಕ್ಕೆ ಅಪಾಯ ಉಂಟಾಗುವ ಆತಂಕವೂ ರೈತರನ್ನು ಕಾಡುತ್ತಿದೆ. ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ನಡೆಸುವುದು ಅನಿವಾರ್ಯ ಆಗಿದೆ. ಕೆಲಕಡೆ ಅಪಘಾತಗಳಾಗಿ ಪ್ರಾಣಗಳು ಕಳೆದುಕೊಂಡ ಉದಾಹರಣೆಗಿವೆ.
ರೈತರಲ್ಲಿ ಈಗೀಗ ಕಣಸುಗ್ಗಿ ಮಾಡಲು ಅಗತ್ಯವಾಗಿ ಬೇಕಾದ ಎತ್ತುಗಳು ಇಲ್ಲ. ಬೆಳೆಗಳ ಮೇಲೆ ವಾಹನಗಳು ಸಾಗಿ ಕಾಳು ಬೇರ್ಪಡುವುದರಿಂದ ರೈತರು ರಸ್ತೆಯಲ್ಲಿ ಬೆಳೆಗಳನ್ನು ಹಾಕುವುದು ಅನಿವಾರ್ಯವಾಗಿದೆ. ಇದು ಒಂದೇಡೆಯಾದರೆ ಯಂತ್ರಗಳಿAದ ಬೇರ್ಪಡಿಸುವ ಕಾಳುಗಳನ್ನು ಕೂಡ ರಸ್ತೆಯಲ್ಲಿ ಒಣಗಿಸುವ ಸಾಂಪ್ರದಾಯವಾಗಿಸಿಕೊAಡಿದ್ದಾರೆ. ಕೆಲವರು ಮಾತ್ರ ಸಗಣಿ ಕಣ ಹಾಕಿ, ಒಕ್ಕಲು ಮಾಡುತ್ತಿದ್ದಾರೆ. ಬಹುತೇಕರು ರಾಷ್ಟ್ರೀಯ - ರಾಜ್ಯ ಹಾಗೂ ಇತರೆ ರಸ್ತೆಗಳನ್ನೇ ಕಣವನ್ನಾಗಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನೋಡಿಯೂ ನೋಡದಂತೆ ಸುಮ್ಮನಿದ್ದಾರೆ.
ರಸ್ತೆಯಿಂದ ಬೆಳೆಗಳನ್ನು ತೆರವು ಮಾಡಿಸಲು ಹೋದರೆ, ರೈತರ ಫಸಲು ಕೈಗೆ ಬಂದಿದೆ. ಬೆಳೆಯನ್ನು ಎಲ್ಲಿ ಒಣಗಿಸಬೇಕೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಸಾಂಪ್ರದಾಯಿಕ ಕಣ ನಿರ್ಮಿಸಲು ಹೆಚ್ಚು ಸಮಯ ಬೇಕು. ಖರ್ಚು ಸಹ ಜಾಸ್ತಿ. ಇದೇ ಕಾರಣಕ್ಕೆ ರೈತರು, ಕಣ ನಿರ್ಮಿಸಲು ಮನಸ್ಸು ಮಾಡುತ್ತಿಲ್ಲ. ಡಾಂಬರ್ ಹಾಗೂ ಕಾಂಕ್ರಿಟ್ ಇರುವ ಜಾಗವನ್ನೇ ಕಣ ಮಾಡಿಕೊಂಡು, ಬೆಳೆಗಳನ್ನು ಒಕ್ಕಲು ಮಾಡಿ ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುಬೇಕಿದೆ ಎಂದು ಅಧಿಕಾರಿಗಳ ಜತೆ ರೈತರು ಅಧಿಕಾರಿಗಳ ಜತೆ ವಾದಕ್ಕೆ ಇಳಿಯುತಾರೆ.
ಹೆದ್ದಾರಿಗಳಲ್ಲಿ ಒಣಗಲು ಹಾಕಿರುವ ಕೃಷಿ ಉತ್ಪನ್ನಗಳ ರಾಶಿಗಳನ್ನು ಕಾಯಲು ರೈತರು ಹಗಲು - ರಾತ್ರಿ ಕಾವಲು ಕಾಯುತ್ತಿದ್ದಾರೆ. ಕಳ್ಳರ ಕಾಟವೂ ಇರುವುದರಿಂದ ಹೆಚ್ಚು ನಿಗಾ ವಹಿಸುತ್ತಿದ್ದಾರೆ. ರಾಶಿಗಳ ಪಕ್ಕದಲ್ಲೇ ರೈತರು ಮಲಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿ ಓಡಾಡಿದರೆ ರೈತರ ಪ್ರಾಣಕ್ಕೆ ಕುತ್ತುಬರುವ ಆತಂಕವಿದೆ. ರಸ್ತೆಗಳಲ್ಲಿ ಹಾಕಿರುವ ರಾಶಿಗಳ ಬಳಿ ಆಗಾಗ ಸಣ-ಪುಟ್ಟ ಅಪಘಾತಗಳು ನಡೆಯುತ್ತಿದ್ದು ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೊಡ್ಡ ಅಪಘಾತವಾಗುವ ಮುನ್ನವೇ ರೈತರು ಅರಿತುಕೊಳ್ಳಬೇಕಿದೆ.
ನೂರಾರು ವಾಹನಗಳು ಓಡಾಡುವ ಹೆದ್ದಾರಿಗಳಲ್ಲಿ ಅಪಾಯ ಹೆಚ್ಚು. ನಿರಂತರ ವಾಹನಗಳು ಸಂಚರಿಸುವ ಜಾಗದಲ್ಲಿ ಬೆಳೆಗಳನ್ನು ರಾಶಿ ಹಾಕಿಕೊಂಡು ಕಾಯುವ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸ್ಥಿತಿಯಲ್ಲಿಯೇ ರೈತರು ಬೆಳೆಗಳನ್ನು ಕಾಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ವಾಹನಗಳ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ಸುಗಮ ಸಂಚಾರದ ಜತೆ ಅಪಘಾತಗಳನ್ನು ತಡೆಯುವ ಜವಾಬ್ದಾರಿ ಕೂಡ ಇರುತ್ತದೆ. ರೈತರು ಅರಿತುಕೊಳ್ಳಬೇಕು ಎಂದು ಪೊಲೀಸರ ಮಾತಾಗಿದೆ.
ರಸ್ತೆ ಮೇಲೆ ಯಾರೂ ಕೂಡ ರೈತರು ಬೆಳೆಗಳನ್ನುಹಾಕಬಾರದು. ಸುಗಮ ಸಂಚಾರಕ್ಕೆ ರೈತರು ಸಹಕರಿಸಬೇಕು. ರಸ್ತೆಯಲ್ಲಿ ಒಣಗಿಸಿದ ಬೆಳೆಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಸ್.ಜಾಹ್ನವಿ, ಎಸ್ಪಿ, ವಿಜಯನಗರ