ನಮ್ಮ ತಪ್ಪು ಕುಟುಂಬಕ್ಕೆ ಶಾಪವಾಗದಿರಲಿ

news
ಹೊಸಪೇಟೆಯಲ್ಲಿ ಕಂದಾಯ ದಿನಾಚರಣೆ ನಿಮಿತ್ತ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಹೊಸಪೇಟೆ: ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ಕಂದಾಯ ಇಲಾಖೆಯಾಗಿದ್ದು, ಸೇವೆ ಜತೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಕಂದಾಯ ದಿನಾಚರಣೆ ನಿಮಿತ್ತ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ, ಕಂದಾಯ ನೌಕರರು, ಗ್ರಾಮ ಸಹಾಯಕರಿಂದ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಾಗಾರ ಕಾರ್ಯಕ್ರಮಕ್ಜೆ ಚಾಲನೆ ನೀಡಿ ಮಾತನಾಡಿದರು.

ಜನ ಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದುವ, ಅವರ ಕಷ್ಟ ಸುಖಗಳಿಗೆ ಹೆಚ್ಚು ಸ್ಪಂದಿಸುವ ಅವಕಾಶ ಕಂದಾಯ ಇಲಾಖೆಯ ನೌಕರರಿಗೆ ಸಿಗಲಿದೆ. ಆ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟು ಜನಸ್ನೇಹಿಯಾಗಬೇಕು. ಸರ್ಕಾರ ಪ್ರತಿ ವಿದ್ಯಮಾನಕ್ಕೂ ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಕಡೆಗೆ ನೋಡುತ್ತದೆ. ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದರೆ ಎಚ್ಚರಿಕೆಯಿಂದಿರುವುದು ಮುಖ್ಯ. ಸರ್ಕಾರಿ ನೌಕರಿ ಶೇ.01 ರಷ್ಟು ಜನರಿಗೆ ಮಾತ್ರ ಸಿಗುತ್ತದೆ. ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕಂದಾಯ ಇಲಾಖೆ ಹುಟ್ಟಿನಿಂದ ಸಾಯುವವರೆಗೆ ಜನರ ಜತೆ ಸಂಬAಧ ಹೊಂದಿದೆ. ಸಿಬ್ಬಂದಿ ಅಶಿಸ್ತಿನಿಂದ ಇದ್ದರೆ ಸಹಿಸಲ್ಲ. ನಮ್ಮ ಸೇವೆಯಲ್ಲಿ ಕೊರತೆಯಿದ್ದಾಗ ಮಾತ್ರ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಇದಕ್ಕೆ ಆಸ್ಪಾದನೆ ಕೊಡಬಾರದು. ನಾವುಗಳಯ ತಪ್ಪುಗಳು ಮಾಡಿದರೆ, ಕುಟುಂಬಕ್ಕೆ ಶಾಪವಾಗಲಿದೆ. ಸಾರ್ಜನಿಕರು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಮಕ್ಕಳಿಗೆ ಎಟಿಎಂ ಆಗದೇ ಜೀವನದ ಪಾಠ ಕಲಿಸಿ. ಸೇವೆಯ ಜತೆ ಕುಟುಂಬಕ್ಕೆ ಸಮಯ ಕೊಟ್ಟು, ಆರೋಗ್ಯದ ಕಡೆ ಗಮನ ಹರಿಸಿ ಎಂದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ರಕ್ತದಾನ ಶಿಬಿರ ಉದ್ಘಾಟಿಸಿದರು. ಕಂದಾಯ ಇಲಾಖೆಯ ವಿವಿಧ ವಿಭಾಗದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಸಿಬ್ಬಂದಿಗಳ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರಿಸಲಾಯಿತು. ಉಪವಿಭಾಗಿಯಾಧಿಕಾರಿ ಚಿದಾನಂದ ಗುರುಸ್ವಾಮಿ, ಪಿ.ವಿವೇಕಾನಂದ, ತಹಸೀಲ್ದಾರ್ ಗಳಾದ ವಿಶ್ವಜೀತ್ ಮೇಹತಾ, ಬಿ.ವಿ.ಗಿರೀಶ್ ಬಾಬು, ಚಂದ್ರಶೇಖರ್ ಶಂಭಣ್ಣ ಗಾಳಿ, ಎಂ.ರೇಣುಕಾ, ಜಿ.ಕೆ.ಅಮರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net