

ಹೊಸಪೇಟೆ: ನಿವೃತ್ತಿದಾರರಿಗೆ ಕೂಡಲೇ ಹೊಸ ಪಿಂಚಣಿ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟದಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯ 7ನೇ ವೇತನ ಸಮಿತಿಯ ವೇತನ ಶಿಫಾರಸ್ಸುಗಳನ್ನು ಆಧರಿಸಿ ನೂತನ ವೇತನ ಹಾಗೂ ಪಿಂಚಣಿಯನ್ನು ನೀಡಲು ರಾಜ್ಯ ಸರ್ಕಾರವು ಆದೇಶಿಸಿದೆ. ಹೀಗಿದ್ದರೂ ಕೂಡ ನಿವೃತ್ತಿದಾರರಿಗೆ ಇದು ವರೆಗೆ ನೂತನ ಪಿಂಚಣಿಯನ್ನು ನೀಡಿಲ್ಲ. ಇದಕ್ಕೆ ಸಂಬAಧಿಸಿದ ಬ್ಯಾಂಕ್‌ನಲ್ಲಿ ಅನೇಕ ಸಬೂಬುಗಳನ್ನು ಹೇಳುತ್ತಿರುವುದರಿಂದ ನಿವೃತ್ತಿ ನೌಕರರಿಗೆ ತೊಂದರೆಯಾಗುತ್ತಿದೆ.
ಸರ್ಕಾರದ ಆದೇಶವಾಗಿ ಎರಡು ತಿಂಗಳಾದರೂ ಬ್ಯಾಂಕ್‌ನಲ್ಲಿ ನೀಡುತ್ತಿರುವ ಕಾರಣಗಳು ಸಮಂಜಸವಾಗಿಲ್ಲ. ಜತೆಗೆ ಜುಲೈ ತಿಂಗಳಿAದ ಬರಬೇಕಾದ ಜೀವನ ನಿರ್ವಹಣ ಭತ್ಯೆ (ತುಟ್ಟಿ ಭತ್ಯೆ) ಸಹ ಇಲ್ಲಿಯ ವರೆಗೆ ಬಂದಿಲ್ಲ. ಇದರಿಂದ ಪಿಂಚಣಿದಾರ ನೌಕರರು ಜೀವನ ನಿರ್ವಹಣೆ ಮಾಡುವುದು ತುಂಬ ಕಷ್ಟಕರವಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಿ ನಿವೃತ್ತಿ ನೌಕರರಿಗೆ ನೀಡಬೇಕಾದ ವೇತನ, ಭತ್ಯೆಗಳನ್ನು ಕೂಡಲೇ ಬಡ್ಡಿ ಸಮೇತ ನೀಡುವಂತೆ ಆದೇಶಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರಮುಖರಾದ ಸುನೀತಾ ಅನ್ವೇಕರ್, ಮರಡಿ ಜಂಬಯ್ಯ ನಾಯಕ, ನಾಗರಾಜ್ ಪತ್ತಾರ್, ಬಿ.ತಾಯಪ್ಪ ನಾಯಕ, ಕಂಪ್ಲಿ ಚಂದ್ರಪ್ಪ, ಲಿಂಗಪ್ಪ, ಚನ್ನಮ್ಮ, ಸಿದ್ದಲಿಂಗಪ್ಪ ಇತರರಿದ್ದರು.