ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸ್ವಚ್ಚತೆ

news
ಹೊಸಪೇಟೆ ಯುವ ಬಿಗ್ರೇಡ್‌ನಿಂದ ತುಂಗಭದ್ರಾ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಸ್ವಚ್ಚತೆ ಕಾರ್ಯ ನಡೆಯಿತು.
Published on

ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ, ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಗರದ ಯುವ ಬ್ರಿಗೇಡ್ ಕಾರ್ಯಕರ್ತರು, ಭಾನುವಾರ ಸ್ವಚ್ಚತಾ ಕಾರ್ಯ ನಡೆಸಿದರು.

ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದ ಅಂಗಳದಲ್ಲಿ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮಧ್ಯದ ಬಾಟಲಿ, ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹ ಮಾಡಿ ಹೊರ ಚೆಲ್ಲಿದರು. ಮಳೆ ಆರಂಭವಾಗಿದ್ದು. ಕೆಲವೇ ದಿನಗಳಲ್ಲಿ ತುಂಗಭದ್ರೆ ಮೈದುಂಬಿ ಹರಿಯಲಿದ್ದಾಳೆ. ಇದಕ್ಕೂ ಮುನ್ನ ಯುವ ಬ್ರಿಗೇಡ್ ಮಿತ್ರರು ನದಿ ದಡದಲ್ಲಿರುವ ಹರಿದಾಡುತ್ತಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ನದಿ ಅಂಗಳದಲ್ಲಿ ಶುಚಿತ್ವ ಕಾಪಾಡಿದರು. ಚಂದ್ರಶೇಖರ್, ಪ್ರವೀಣ್ ಹಿಂದೂ, ವ್ಯಾಸ, ಬಸವರಾಜ್, ಭಾರತ್, ಆನಂದ್, ಮನೀಶ್, ರಾಘವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net