ನ್ಯಾ.ನಾಗೋಹನದಾಸ್ ಆಯೋಗದ ಅವೈಜ್ಞಾನಿಕ ವರದಿ ತಿರಸ್ಕಾರಿಸಿ

20 MANJU 06
Published on

ಹೊಸಪೇಟೆ: ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಒಳ ಮೀಸಲಾತಿ ವರದಿ ತಿರಸ್ಕಾರಕ್ಕೆ ಆಗ್ರಹಿಸಿ ಒಳ ಮೀಸಲಾತಿ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ sಸಾವಿರಾರು ಸಂಖ್ಯೆಯಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಂದ ಬುಧವಾರ ಪ್ರತಿಭಟನಾ ರ‍್ಯಾಲಿ ನಡೆಯಿತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಿಂದ ಆರಂಭವಾದ ಪ್ರತಿಭಟನಾ ಮೇರವಣಿಗೆ ವಾಲ್ಮೀಕಿ ವೃತ್ತ, ಮದಕರಿ ವೃತ್ತ, ಗಾಂಧಿಚೌಕು, ಕೇಂದ್ರ ಬಸ್‌ನಿಲ್ದಾಣದ ಮೂಲಕ ಡಾ.ಪುನೀತ್ ರಾಜಕುಮಾರ್ ವೃತ್ತದ ವರೆಗೆ ಅರೆಬೆತ್ತಲಾಗಿ ಮೆರವಣಿಗೆ ನಡೆಯಿತು. ಈ ವೇಳೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ತೀವ್ರಗೊಂಳಿಸಿದರು. ರಸ್ತೆ ಮಧ್ಯೆಯೇ ತಲೆ ಬೋಳಿಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಗ್ರಹಿಸಿದರು. ಕೆಲವರು ರಸ್ತೆಯಲ್ಲೇ ಭಜನಾ ಹಾಡುಗಳನ್ನ ಹಾಡುತ್ತಾ ಪ್ರತಿಭಟನೆ ನಡೆಸಿದರು.

ಬಂಜಾರ ಸಮುದಾಯದ ಮುಖಂಡ ರಾಮಜೀ ನಾಯ್ಕ ಮಾತನಾಡಿ, ಸಂವಿಧಾನದ ಆಶಯದಂತೆ ಸಾಮಾಜಿಕವಾಗಿ ಅತ್ಯಂತ ಶೋಷಿತ 101 ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ವಾಸ್ತವಿಕ ಸಮೀಕ್ಷೆ ನಡೆಸದೆ ಅವೈಜ್ಞಾನಿಕ ಮತ್ತು ಅವಾಸ್ತವಿಕ ವರದಿ ನೀಡಲಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿಯಾಗಬಾರದು. 2011ರಲ್ಲಿ 27.49 ಲಕ್ಷ ಜನಸಂಖ್ಯೆ ಇದ್ದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯ ಈಗ 27.69 ಲಕ್ಷ ಜನಸಂಖ್ಯೆ ಇದೆ ಎದು ಹೇಳಲಾಗುತ್ತಿದೆ. ಅವೈಜ್ಞಾನಿಕವಾಗಿ ನೀರುವ ವರದಿಯನ್ನು ಎಡ ಸಮುದಾಯಗಳಿಗೆ ಶೇ.6, ಬಲ ಸಮುದಾಯಗಳಿಗೆ ಶೇ.6, ಇನ್ನೂ 63 ಜಾತಿಗಳಿಗೆ ಶೇ.5ರಷ್ಟು ಹಂಚಿಕೆ ಮಾಡಿ ಕ್ಯಾಬಿನೇಟ್ ಅಂಗಿಕಾರ ಮಾಡಿರುವುದು ಸರ್ಕಾರ ಈ ಸಮುದಾಯಗಳಿಗೆ ಅನ್ಯಾಯಾ ಮಾಡಿದೆ. ಈ ವರದಿಯನ್ನು ತಿರಸ್ಕಾರ ಮಾಡಿ ನಮ್ಮ ಸಮುದಾಯಕ್ಕೆ ನ್ಯಾಯಾ ಕೊಡಿಸಬೇಕು ಎಂದು ಆಗ್ರಹಿಸಿದರು.

ಬಂಜಾರ ಗುರುಪೀಠದ ಶ್ರೀ ಸರ್ದಾಲ್ ಸೇವಾಲಾಲ್ ಸ್ವಾಮೀಜಿ, ದೂಪದಹಳ್ಳಿ ತಾಂಡಾ ಮಠದ ಶಿವಪ್ರಕಾಶ್ ಸ್ವಾಮೀಜಿ , ಮುಖಂಡರಾದ ಲಾಲ್ಯಾನಾಯ್ಕ್, ದೊಡ್ಡರಾಮಣ್ಣ, ಪ್ರಮುಖರಾದ ಅಂಜಿನಿ, ಡಿ.ಲಾಲ್ಯನಾಯ್ಕ, ಡಿ.ತಿಪ್ಪೇಸ್ವಾಮಿ, ಸಣ್ಣಹುಲಗಪ್ಪ, ಗೋವಿಂದನಾಯ್ಕ, ಭೋವಿ ರಮೇಶ್, ಬಾಬುನಾಯ್ಕ, ತೇಜಾನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net