ಒಳ ಮೀಸಲಾತಿ ಜಾರಿ ಮಾಡಿ

16 MANJU 05
Published on

ಹೊಸಪೇಟೆ: ಒಳ ಮೀಸಲಾತಿ ಜಾರಿಗಾಗಿ ವಿಜಯನಗೆ ಜಿಲ್ಲೆ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸುರ್ಪೀಂ ಕೋರ್ಟ್ ತೀರ್ಪಿನ ಪ್ರಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು. ಮಾದಿಗರು ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಬೆಂಬಲಿಸಿದ ಸಮುದಾಯವಾಗಿದೆ. ಈಗ ಒಳ ಮೀಸಲಾತಿಯನ್ನು ಜಾರಿ ಮಾಡಿ ಋಣ ತೀರಿಸುವ ಕಾಲವಕಾಶವದಗಿ ಬಂದಿದೆ. ಒಳ ಮೀಸಲಾತಿ ಜಾರಿಯಾಗುವವರೆಗೂ ಸರ್ಕಾರದ ಬಾಕ್ ಲಾಗ್ ಉದ್ದೇಗಳನ್ನು ಸ್ಥಗಿತಗೊಳಿಸಿಬೇಕು. ಒಳ ಮೀಸಲಾತಿ ಜಾರಿಯಾಗುವುದರಿಂದ ತಳ ಸಮುದಾಯಗಳಿಗೆ ಅನುಕೂಲವಾಗಲಿದೆ. ಶಿಕ್ಷಣಕ್ಕೆ ಮತ್ತು ಉದ್ಯೋಗದಲ್ಲಿ ಅನೂಕೂಲವಾಗಲಿದೆ. ಸುರ್ಪೀಂ ಕೋರ್ಟ್ ತೀರ್ಪೀನ ಪ್ರಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಹಂಪಿಯ ಮಾತಂಗ ಪರ್ವತ ಶ್ರೀ ಪೂರ್ಣಾನಂದ ಭಾರತೀ ಸ್ವಾಮೀಜಿ, ಪ್ರಮುಖರಾದ ಜಗನ್ನಾಥ, ರಾಘವೇಂದ್ರ, ಶೇಕ್ಷವಲಿ, ಕೊಟಗಿನಹಾಳ್ ಮಲ್ಲಿಕಾರ್ಜುನ, ಕಾರಿಗನೂರು ಲಕ್ಷ್ಮಣ, ಮರಿದಾಸ, ಶ್ರೀನಿವಾಸ, ವಿಜಯ್ ಕುಮಾರ, ಕರಿಯಪ್ಪ, ಬಸವರಾಜ, ವೀನೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net