ಒಳ ಮೀಸಲಾತಿ ಜಾರಿಗೆ ಸರ್ಕಾರ ಮೀನಾಮೇಷ

29 MANJU 05
Published on

ಹೊಸಪೇಟೆ: ಒಳ ಮೀಸಲಾತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೆಪ ಹುಡುಕುತ್ತಾ ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಸಮುದಾಯಗಳ ಸಂಚಾಲಕ ಬಲಹುಣಸಿ ರಾಮಣ್ಣ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ ನಾಗಮೋಹನ್ ದಾಸ್ ಆಯೋಗ ಸಿಎಂ ಸಿದ್ದರಾಮಯ್ಯಗೆ ಭೇಟಿ ಮಾಡಿ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಒಳಮೀಸಲಾತಿಯ ವರ್ಗೀಕರಣದ ಬದಲಾಗಿ ಆದಿ ಕರ್ನಾಟಕ, ಆದಿದ್ರಾವಿಡ ಜಾತಿಗಳಲ್ಲಿ ಗೊಂದಲವಿರುವುದರಿAದ ಮತ್ತೊಂದು ಸಮೀಕ್ಷೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಮೀಕ್ಷೆಯ ವಿವರಗಳು ಮತ್ತು ನಿರ್ವಹಣೆ ಮಾಡಲು ಸಮಿತಿ ರಚಿಸಬೇಕೆಂದು ಆಯೋಗ ಹೇಳಿದೆ. ಆ.01 ರಂದು ಸುಪ್ರೀಂಕೋರ್ಟ್ ತೀರ್ಪು ಬಂದು ಒಳಮೀಸಲಾತಿ ಜಾರಿ ಮಾಡುವ ಆಧಿಕಾರ ರಾಜ್ಯಗಳಿಗೆ ವಹಿಸಿದ ನಂತರ ನಿಧಾನಗತಿಯಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದೆ. ಕಾಂಗ್ರೆಸ್ ದಿಂದ ಸರ್ಕಾರ, ಹರ್ಯಾಣದ ಬಿಜೆಪಿ ಸರ್ಕಾರ ತೀರ್ಪುಬಂದ ಒಂದು ವಾರದಲ್ಲೆ ಒಳ ಮೀಸಲಾತಿ ಜಾರಿಮಾಡಿತು. ತೆಲಂಗಾಣದ, ಆಂಧ್ರಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿ ಮಾಡಲು ಆದೇಶ ಮಾಡಿವೆ. ಆದರೆ, ಸರ್ಕಾರ ನೆಪ ಹುಡುಕುತ್ತಾ ಮೀನಾಮೇಷ ಎಣಿಸುತ್ತಿದೆ ಎಂದರು.

ಇದು ಕಾಲಾಹರಣ ಮಾಡುವ ತಂತ್ರವಾಗಿದೆ. ಸರ್ಕಾರದ ಈ ನಿಧಾನ ದ್ರೋಹವನ್ನು ಮಾದಿಗ ಸಮಾಜ ಒಪ್ಪುತ್ತಿಲ್ಲ. ಮಧ್ಯಂತರ ವರದಿಯಲ್ಲಿ ಮಾದಿಗ ಸಮಾಜದ ಶೇ 6 ರ ಪ್ರತ್ಯೇಕ ಮೀಸಲಾತಿ ಜಾರಿ ಮಾಡಿ . ಮತ್ತೆ ಸಮೀಕ್ಷೆ ಮಾಡಿ. ಇದು ನಮ್ಮ ಬೇಡಿಕೆಯಾಗಿತ್ತು. ಆದರೆ ಆಯೋಗ ವರ್ಗೀಕರಣದ ವಿಷಯ ಬದಿಗಿಟ್ಟು, ಹಸಿದು ಕಂಗಾಲಾಗಿರುವ ಮಾದಿಗ ಸಮಾಜಕ್ಕೆ ಮಾತ್ತೊಂದು ಸಮೀಕ್ಷೆಯ ಶಿಫಾರಸ್ಸು ಮಾಡಿರುವುದು ಅನ್ಯಾಯವಾಗಿದೆ.

ಸರ್ಕಾರ ಈ ನೆಡೆಯ ವಿರುದ್ಧ ನಾವು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ಸರ್ಕಾರ ತನ್ನ ನೆಡೆಯನ್ನು ಸರಿಪಡಿಸಿಕೊಳ್ಳಲಿ. ಮಾದಿಗರ ಪಾಲಿನ ಶೇ.6 ರ ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ. ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಮಾಧುಸ್ವಾಮಿ ವರದಿಯನ್ನು ಜಾರಿಮಾಡಲಿ, ಅಥವಾ ಸದಾಶಿವ ಆಯೋಗದ ದತ್ತಾಂಶ ಬಳಸಿ ಹೊಸ ಆದೇಶ ಮಾಡಲಿ, ಇದ್ಯಾವುದನ್ನು ಮಾಡದೇ ಕೇವಲ ಸಮೀಕ್ಷೆ ಮಾಡುವ ಯೋಜನೆಯ ಹಿಂದೆ ಕಾಲಾಹರಣದ ಉದ್ದೇಶ ಬಿಟ್ಟರೆ ಬೇರೇನಿಲ್ಲ. ಒಳಮೀಸಲಾತಿಯ ಬಗ್ಗೆ ಸರ್ಕಾರ ಬದ್ಧತೆ ತೋರಿಸಬೇಕು ಎಂದು ಆಗ್ರಹಿಸಿದರು,

ಪ್ರಮುಖರಾದ ಜನಗ್ನಾಥ, ಶೇಷು, ಮಂಜುನಾಥ, ಜಿ.ಕೊಲ್ಲಾಪುರಿ, ಬಿ.ಶೇಕ್ಷಾವಲಿ, ದುರಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net